ಸುಳ್ಯ ಎನ್ನೆoಪಿಯುಸಿಯಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ

0

 

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ. ಕಾಲೇಜಿನಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆಯನ್ನು ಆಗಸ್ಟ್ 10ರಂದು ಆಚರಿಸಲಾಯಿತು.
ಕಾಲೇಜಿನ ಪ್ರಾoಶುಪಾಲರಾದ ಶ್ರೀಮತಿ ಹರಿಣಿ ಪುತ್ತೂರಾಯ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ನಮಗೆ ವೈಯಕ್ತಿಕ ಸ್ವಚ್ಛತೆ ಬಹಳ ಮುಖ್ಯ. ವಿದ್ಯಾರ್ಥಿಗಳು ಆರೋಗ್ಯವಂತರಾಗಿದ್ದು ಕಲಿಕೆಯಲ್ಲೂ ಚೆನ್ನಾಗಿ ತೊಡಗಿಸಿಕೊಳ್ಳಬೇಕಾದರೆ ಸ್ವಚ್ಛತೆ ಕಡೆ ಗಮನ ನೀಡಬೇಕು ಎಂದರು. ಜಂತು ಹುಳು ನಾಶಕದ ಮೂಲಕ ಅವುಗಳ ನಿವಾರಣೆ ಮಾಡಬಹುದು ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಜಂತು ಹುಳು ನಾಶಕ ಮಾತ್ರೆಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೋಧಕ, ಬೋಧಕೇತರ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here