ಪಂಜ ಗ್ರಾಮ ಪಂಚಾಯತ್ ನಲ್ಲಿ ರಾಷ್ಟ್ರ ಧ್ವಜ ಹಸ್ತಾಂತರ

0
169

 

ಹರ್ ಗರ್ ತಿರಂಗ’ ಹಾಗೂ 75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸುವ ನಿಟ್ಟಿನಲ್ಲಿ ಪಂಚಮ ಸಂಜೀವಿನಿ ಒಕ್ಕೂಟದ ಸದಸ್ಯೆಯರು ಹೊಲಿಗೆ ಮಾಡಿ ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಿದ ರಾಷ್ಟ್ರ ಧ್ವಜವನ್ನು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ನೇತ್ರಾವತಿ ಕಲ್ಲಾಜೆ ರವರು ಗ್ರಾಮ ಪಂಚಾಯತ್ ಸದಸ್ಯರುಗಳಿಗೆ, ಸಿಬ್ಬಂದಿಗಳಿಗೆ ಹಾಗೂ ವಿಶೇಷ ಚೇತನರ ಮೇಲ್ವಿಚಾರಕಿ ಶ್ರೀಮತಿ ಮೀನಾಕ್ಷಿ ಇವರುಗಳಿಗೆ ಹಂಚುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಕೆ. ಪದ್ಮಯ್ಯ, ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಸರ್ವ ಸದಸ್ಯರುಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಪಂಚಮ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಹೇಮಲತಾ ಪಲ್ಲೋಡಿ, ಕಾರ್ಯದರ್ಶಿ ಶ್ರೀಮತಿ ತೀರ್ಥಕುಮಾರಿ ಕೋಟಿಯಡ್ಕ, ಯಂ ಬಿ ಕೆ ಶ್ರೀಮತಿ ತ್ರಿವೇಣಿ ಬೋಳ್ಳಾಜೆ, ಎಲ್ ಸಿ ಆರ್ ಪಿ ಗಳಾದ ಶ್ರೀಮತಿ ಸವಿತಾ ಕೆರೆಮೂಲೆ ಮತ್ತು ಶ್ರೀಮತಿ ದಿವ್ಯಾ ಚಿದ್ಗಲ್ ಹಾಗೂ ಒಕ್ಕೂಟದ ಸದಸ್ಯೆಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here