ಈ ರಸ್ತೆಯಲ್ಲಿ ನಿಂತು ಸೆಲ್ಫಿ ತೆಗೆಯಿರಿ – ಇಲ್ಲಿ ಓಡಾಡುವ ವಾಹನಕ್ಕೆ ಸ್ಪೀಡ್ ಬ್ರೇಕರ್ ಬೇಕಿಲ್ಲ

0

 

ರಸ್ತೆಯ ಹೊಂಡದಲ್ಲೇ ಮೀನು ಸಾಕಬಹುದು, ತಾವರೆ ಬೆಳೆಸಬಹುದು

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಸುಳ್ಯದ ರಸ್ತೆಯ ವೀಡಿಯೋ

 

ಇದು ಮಾಣಿ – ಮೈಸೂರು ಹೆದ್ದಾರಿಯ ಸುಳ್ಯದ ಶ್ರೀರಾಂ ಪೇಟೆ ಜಂಕ್ಷನ್ ರಸ್ತೆ. ಈ ರಸ್ತೆಯಲ್ಲಿ ಇರುವ ಹೊಂಡದಲ್ಲಿ ಮಳೆ ನೀರು ನಿಲ್ಲೊತ್ತೆ. ಇಲ್ಲಿ ಮೀನು ಸಾಕಬಹುದು, ತಾವರೆ ಬೆಳೆಸಬಹುದು’ ಹೀಗೊಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದು‌ ಸುಳ್ಯದ ಮುಖ್ಯ ರಸ್ತೆಯ ಅವ್ಯವಸ್ಥೆಯನ್ನು ತೋರಿಸುವ ದೃಶ್ಯ. ಮುಖ್ಯ ರಸ್ತೆಯಿಂದ ಜೂನಿಯರ್ ಕಾಲೇಜಿಗೆ ತಿರುಗುವ ಜಂಕ್ಷನ್ ಇದಾಗಿದ್ದು ರಸ್ತೆ ಹೊಂಡ ಗುಂಡಿಗಳಿಂದ ಕೂಡಿದೆ. ವಾಹನ ಸಂಚಾರಕ್ಕೆ ತೊಂದರೆ ಪಡುವ ಸ್ಥಿತಿ ಇದೆ.

ಮಳೆ ಬಂದು ಆ ಹೊಂಡಗಳಲ್ಲಿ ನೀರು ನಿಂತರೇ ರಸ್ತೆಯಲ್ಲೇ ಚರಂಡಿ ಮಾಡಿದ್ದಾರೆಂಬ ಭಾವ ಮೂಡುತ್ತದೆ.
ಇಂದು ಆ ರಸ್ತೆಯಲ್ಲಿ ಬಂದ ತ್ರಿಶೂಲ್ ಕಂಬಳ ಎಂಬವರು ರಸ್ತೆಯ ಅವ್ಯವಸ್ಥೆ ಕುರಿತು ವೀಡಿಯೋ ಚಿತ್ರಿಕರಣ ಮಾಡಿ ಹೀಗೆ ವಿವರಿಸಿದ್ದಾರೆ… “ಇವತ್ತು ನಾನು ವಿಶ್ವ ವಿಖ್ಯಾತ ಸ್ಥಳದಲ್ಲಿದ್ದೇನೆ. ಮಾಣಿ – ಮೈಸೂರು ಹೆದ್ದಾರಿಯ ಸುಳ್ಯದ ಶ್ರೀರಾಂ ಪೇಟೆ ಜಂಕ್ಷನ್. ರಸ್ತೆ ತುಂಬಾ ಚೆನ್ನಾಗಿದೆ. ಈ ರಸ್ತೆಲಿ ಹೋಗುವ ವಾಹನಕ್ಕೆ ಸ್ಪೀಡ್ ಬ್ರೇಕರ್ ಬೇಕಿಲ್ಲ. ಇಲ್ಲಿಯ ಜನಪ್ರತಿನಿಧಿಗಳು ಹೇಗೆ ರೆಸ್ಪಾಂಡ್ ಮಾಡಿದ್ದಾರೋ ಗೊತ್ತಿಲ್ಲ. ಆದ್ರೆ ಸ್ಪೀಡ್ ಬ್ರೇಕರ್ ಬೇಕಿಲ್ಲ. ಅಟೋಮೆಟಿಕ್. ಪ್ರಕೃತಿಯೇ ಕಂಟ್ರೋಲ್ ಮಾಡಿದೆ. ಎಂತ ಗಾಡಿ ಬಂದ್ರು ಎಲ್ಲಿ ಸ್ಲೋ ಆಗಲೇ ಬೇಕು. ಇಲ್ಲಂದ್ರೆ ಅವ ಡ್ರೈವರೇ ಅಲ್ಲ. ರಸ್ತೆಯ ಹೊಂಡದಲ್ಲಿ ನೀರು ನಿಂತಿದೆ. ಮಳೆಗಾಲದಲ್ಲಿ ಮೀನು ಹಿಡಿಬೋದು. ಮೀನು ಸಾಕಬಹುದು. ತಾವರೆ ಬೆಳೆಯಬಹುದು. ಇಲ್ಲಿ ಬಂದವರೆಲ್ಲ ಈ ರಸ್ತೆಯೊಂದಿಗೆ ಸೆಲ್ಫಿ ತೆಗೆಯಿರಿ. ಯಾಕಂದ್ರೆ ಅಷ್ಟು ಚೆನ್ನಾಗಿದೆ ಎಂದು ಹೇಳಿ ರಸ್ತೆಯ ಅವ್ಯವಸ್ಥೆಯನ್ನು ವಿವರಿಸಿದ್ದಾರೆ. ಈ ವೀಡಿಯೋ ಫೇಸ್ ಬುಕ್ ನಲ್ಲಿ ಹರಿಯ ಬಿಟ್ಟಿದ್ದಾರೆ.

 

ಈ ರಸ್ತೆಯ ಹೊಂಡಗಳನ್ನು ಆಡಳಿತದವರು ಗಮನಿಸಿ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.