ಕೆ.ವಿ.ಜಿ. ಅಮರ ಜ್ಯೋತಿ ಪಿ.ಯು. ಕಾಲೇಜಿನಲ್ಲಿ ಸಾಂಪ್ರದಾಯಕ ಆಟಿ ಉತ್ಸವ

0

 

 

ಕೆ.ವಿ.ಜಿ. ಅಮರ ಜ್ಯೋತಿ ಪಿ.ಯು. ಕಾಲೇಜಿನಲ್ಲಿ ಆ.10 ರಂದು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಮತ್ತು ಸಾಂಪ್ರದಾಯಿಕ ವಿಶೇಷತೆಯ ಬಗ್ಗೆ ತಿಳುವಳಿಕೆ ಮೂಡಿಸುವ ಸಲುವಾಗಿ ಆಟಿ ಉತ್ಸವವನ್ನು ಆಯೋಜಿಸಲಾಗಿತ್ತು.
ಆಟಿ ಉತ್ಸವದಲ್ಲಿ ಆಟಿ ಸಾಂಪ್ರದಾಯಿಕ ಅಡುಗೆ ತಯಾರಿ, ಜನಪದ ನೃತ್ಯ ಮತ್ತು ಹಾಡು ಸಾಂಪ್ರದಾಯಿಕ ಕರಕುಶಲ ವಸ್ತುಗಳ ತಯಾರಿಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ತೀರ್ಪುಗಾರರಾಗಿ ಸ್ಪರ್ಧೆಗಳಿಗೆ ರೊಟೇರಿಯನ್ ಲತಾ ಮಧುಸೂಧನ್ ಅಧ್ಯಾಪಕರಾದ ಪ್ರೊ. ಸ್ಮಿತಾ ಉಜ್ವಲ್, ಪ್ರೊ. ಕೃಷ್ಣರಾಜ್, ಪ್ರೊ.ಪ್ರವೀಣ್, ಪ್ರೊ. ಮನೋಹರ್, ಸುಜಿತ್, ಲಕ್ಷ್ಮಿಲಾವಣ್ಯ, ಹರ್ಷಿತಾ ರಂಜಿತ್ ಸಹಕರಿಸಿದ್ದರು. ಪ್ರಾಂಶುಪಾಲರಾದ ಡಾ. ಯಶೋದ ರಾಮಚಂದ್ರ, ಉಪಪ್ರಾಂಶುಪಾಲರಾದ ದೀಪಕ್ ವೈ ಆರ್ ಹಾಗೂ ಅಧ್ಯಾಪಕ ಅಧ್ಯಾಪಕೇತರ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here