ಶೇಣಿ: ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ಮತ್ತು ರಾಷ್ಟ್ರಧ್ವಜ ವಿತರಣೆ

0

 

ಅಮರಪಡ್ನೂರು ಗ್ರಾಮದ ಶೇಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.


ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯಾ ಮೇಲ್ತೋಟ ಅವರು ರಾಷ್ಟ್ರಧ್ವಜ ಅಭಿಯಾನಕ್ಕೆ ಚಾಲನೆ ನೀಡಿ ಶಾಲಾಮಕ್ಕಳ ಪೋಷಕರಿಗೆ ರಾಷ್ಟ್ರಧ್ವಜವನ್ನು ವಿತರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್ ಚೂಂತಾರು ಅವರು ರಾಷ್ಟ್ರಧ್ವಜದ ಮಹತ್ವ, ಬಳಕೆ ಮತ್ತು ಸರ್ಕಾರದ ಸುತ್ತೋಲೆಯ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಕಾಶ್ ರವರು ಸರ್ಕಾರಿ ನಿಯಮಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮೀನಾಕ್ಷಿ ಚೂಂತಾರು, ಸೀತಾ ಹೆಚ್, ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ಮಾಧವ ಗೌಡ ಪಿಂಡಿಬನ, ಮುಖ್ಯ ಗುರುಗಳಾದ ಪ್ರಭಾಕರ ಮಾಡಬಾಕಿಲು, ಪಂಚಾಯತ್ ಸಿಬ್ಬಂದಿಗಳಾದ ವಸಂತ, ಯಶವಂತ, ಆಶಾ ಕಾರ್ಯಕರ್ತೆ ರತ್ನಾವತಿ ಜನಾರ್ದನ, ಶಾಲಾ ಶಿಕ್ಷಕರು ರಂಗಯ್ಯ, ಸವಿತಾ, ಮಂಗಳ ಹಾಗೂ ಎಸ್ ಡಿ ಎಮ್ ಸಿ ಸದಸ್ಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಪ್ರಭಾಕರ ಮಾಡಬಾಕಿಲು ಸ್ವಾಗತಿಸಿ ವಂದಿಸಿದರು.