ಮೇನಾಲ : ವರಮಹಾಲಕ್ಷ್ಮಿ ಪೂಜಾ ಸಮಿತಿ ಮೇನಾಲ ನೂತನ ಸಮಿತಿ ರಚನೆ

0
166

ಅಧ್ಯಕ್ಷರಾಗಿ: ಮಮತಾ ರೈ ಬೇಲೆಂತಿಮಾರು, ಕಾರ್‍ಯದರ್ಶಿ: ಚಿತ್ರಾ ರಾಧೇಶ್

p>


ವರಮಹಾಲಕ್ಷ್ಮಿ ಪೂಜಾ ಸಮಿತಿ ಮೇನಾಲ ಇದರ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ೨೦೨೨-೨೩ನೇ ಸಾಲಿನ ಆಧ್ಯಕ್ಷರಾಗಿ ಮಮತಾ ರೈ ಬೇಳೆಂತಿಮಾರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪೂರ್ಣಿಮಾ ಅವಿನ್ ರೈ ಬೇಲ್ಯ ಹಾಗೂ ಉಷಾಬಾಲಕೃಷ್ಣ ಕಲ್ಲಗುಡ್ಡೆ, ಪ್ರಧಾನ ಕಾರ್‍ಯದರ್ಶಿಯಾಗಿ ಚಿತ್ರಾ ರಾಧೇಶ್, ಕಾರ್‍ಯದರ್ಶಿಯಾಗಿ ದೀಪ್ತಿಸುನೀಲ್ ರೈ ಹಾಗೂ ಪ್ರಮೀಳಾ ತುದಿಯಡ್ಕ ಆಯ್ಕೆಯಾದರು.
ಆಗಸ್ಟ್ ೭ರಂದು ಆದಿತ್ಯವಾರ ಶ್ರೀಕೃಷ್ಣ ಭಜನಾ ಮಂದಿರ ಮೇನಾಲ ಇಲ್ಲಿ ನಡೆದ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಆಗಸ್ಟ್ ೫ರಂದು ನಡೆದ ವರಮಹಾಲಕ್ಷ್ಮಿ ಪೂಜೆಯ ಖರ್ಚುವೆಚ್ಚಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಪೂಜಾ ಸಮಿತಿಯ ಅಧ್ಯಕ್ಷೆ ಶಿಲ್ಪಾ ಸುಭೋದ್ ಶೆಟ್ಟಿ ಸ್ವಾಗತಿಸಿ, ಪೂರ್ವಾಧ್ಯಕ್ಷೆ ವೀಣಾ ಕಿರಣ್ ರೈ ವಂದಿಸಿದರು.

LEAVE A REPLY

Please enter your comment!
Please enter your name here