ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ – ಹರ್ ಘರ್ ತಿರಂಗ್ ಅಭಿಯಾನ – ಅಂಚೆ ಇಲಾಖೆಯಿಂದ ರಾಷ್ಟ್ರ ಧ್ವಜ ವಿತರಣೆ

0

 

 

 

ಪೋಸ್ಟ್ ಮ್ಯಾನ್ ಅಕ್ಷಯ್ ಪುಣಚ ನಿರ್ದೇಶನದಲ್ಲಿ ರಚನೆಯಾದ ಕಿರುಚಿತ್ರದ ಪೋಸ್ಟರ್ ದೊಡ್ಡತೋಟ ಅಂಚೆ ಇಲಾಖೆ ವತಿಯಿಂದ ಬಿಡುಗಡೆ

 

 

ಸಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ನಡೆಯುತ್ತಿರುವ ಹರ್ ಘರ್ ತಿರಂಗ ಅಭಿಯಾನದ ಹಿನ್ನೆಲೆಯಲ್ಲಿ ಭಾರತೀಯ ಅಂಚೆ ಇಲಾಖೆಯು ಮನೆಗೆ ಮನೆಗೆ ರಾಷ್ಟ್ರ ಧ್ವಜ ವಿತರಣೆ ಹಮ್ಮಿಕೊಂಡಿದ್ದು, ಅಂಚೆ ಇಲಾಖೆ ದೊಡ್ಡತೋಟ ದಲ್ಲಿಯೂ ರಾಷ್ಟ್ರ ಧ್ವಜ ವಿತರಣೆ ನಡೆದಿದೆ. ಹರ್ ಘರ್ ತಿರಂಗ ಅಭಿಯಾನವನ್ನೊಳಗೊಂಡ ಕಿರುಚಿತ್ರದ ಪೋಸ್ಟರ್ ಬಿಡುಗಡೆಯು ಇಂದು ದೊಡ್ಡತೋಟ ಅಂಚೆ ಇಲಾಖೆಯಲ್ಲಿ ನಡೆಯಿತು.

 

ನಿವೃತ್ತ ಯೋಧ ಉಮೇಶ್ ದೊಡ್ಡತೋಟ ರವರು ಪೋಸ್ಟರ್ ಬಿಡುಗಡೆಗೊಳಿಸಿದರು. ಉಪ ಅಂಚೆಪಾಲಕರಾದ ಚಂದ್ರಶೇಖರ ಬಳ್ಳಕ್ಕ ರವರು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕ ಅಕ್ಷಯ್ ಪುಣಚ, ಖ್ಯಾತ ಯಕ್ಷಗಾನ ಕಲಾವಿದ ಮಹೇಶ್ ಮಣಿಯಾಣಿ ದೊಡ್ಡತೋಟ, ಹಿರಿಯ ಅಂಚೆ ಪಾಲಕ ರಾಧಾಕೃಷ್ಣ ಭಟ್ ದೊಡ್ಡತೋಟ, ಅಂಚೆ ಇಲಾಖೆಯ ಸಿಬ್ಬಂದಿಗಳಾದ ಮಲ್ಲಯ್ಯ ಮಕ್ಕಟ್ಟಿ, ಕೇಶವ ಬಾಳೆಗುಂಡಿ, ರವಿ ಬಿ., ವಿನಯ ಜಯರಾಮ ಉಬರಡ್ಕ, ರವಿ ಪೈಲೂರು, ಪಿಕಪ್ ಚಾಲಕ ಶಶಿಧರ ಬಾಳೆಗುಂಡಿ, ದೊಡ್ಡತೋಟದ ವರ್ತಕರು ಹಾಗೂ ಕಿರುಚಿತ್ರದ ಪೋಷಕರಾದ ಚೇತನ್ ಕುಮಾರ್, ಉದಯಕುಮಾರ್, ಪ್ರೇಮಾನಂದ ಕಾಮತ್, ಕುಮಾರ್ ಭಟ್ ಹಾಗೂ ಕಿರುಚಿತ್ರ ದಲ್ಲಿ ನಟಿಸಿದ ಮಾಧವ ನಂದಗೋಕುಲ, ಮೆಸ್ಕಾಂನ ನಾಗೇಶ್ ಕೆ., ಪುಟಾಣಿ ಕಲಾವಿದರಾದ ಚಿಂತನ ಮತ್ತು ವಿನೀತ್ ನಂದಗೋಕುಲ ಉಪಸ್ಥಿತರಿದ್ದರು.

ನಿರ್ದೇಶಕ ಅಕ್ಷಯ್ ಕುಮಾರ್ ರವರು ಮೂಲತಃ ವಿಟ್ಲದ ಪುಣಚದವರು. ಪ್ರಸ್ತುತ ಅಂಚೆ ಇಲಾಖೆಯಲ್ಲಿ 9 ತಿಂಗಳಿನಿಂದ ಕರ್ತವ್ಯ ಸಲ್ಲಿಸುತ್ತಿದ್ದಾರೆ.
ಕಿರುಚಿತ್ರದ ನಿರ್ದೇಶನ ಸಂಕಲನವನ್ನು ಅಕ್ಷಯ್ ಕುಮಾರ್ ರವರೇ ನಿರ್ವಹಿಸಿದ್ದಾರೆ. ದೊಡ್ಡತೋಟ ಶಾಲಾ ವಿದ್ಯಾರ್ಥಿಗಳು ಕಿರಿಚಿತ್ರದಲ್ಲಿ ನಟಿಸಿದ್ದಾರೆ.