ಕಲ್ಮಕಾರು : ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ವತಿಯಿಂದ ಶ್ರಮ ಸೇವೆ

0

ಕಲ್ಮಕಾರಿನಲ್ಲಿ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ವತಿಯಿಂದ ಶ್ರಮ ಸೇವೆ ನಡೆಸಲಾಯಿತು.

 

 

ಕಲ್ಮಕಾರು ಮೋಹನ್ ಬಾಳೆ ಬೈಲು ಎಂಬವರ ಮನೆಯ ಹಿಂಬದಿ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿತ್ತು.ಅದನ್ನು ಆ.10 ರಂದು ಶ್ರಮದಾನದ ಮೂಲಕ ಮಣ್ಣಿನ ತೆರವು ಕಾರ್ಯ ಮಾಡಲಾಯಿತು.

ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಸೂಚನೆ ಮೇರೆಗೆ
ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಧಿಕಾರಿ ಸುದರ್ಶನ ಜೋಯಿಸ್ ಅವರ ನೇತೃತ್ವದಲ್ಲಿ ಕಾರ್ಯಕರ್ತರಿಂದ ಶ್ರಮದಾನ ನಡೆಯಿತು.

ಶ್ರೀ ಸುಬ್ರಹ್ಮಣ್ಯ ಮಠದ 32 ಕ್ಕೂ ಅಧಿಕ ಕಾರ್ಯಕರ್ತರು ಶ್ರಮದಾನ ಮಾಡುವ ಮೂಲಕ ಮೋಹನ್ ಬಾಳೆ ಬೈಲು ಎಂಬವರ ಮನೆಯ ಬದಿಯಲ್ಲಿ ಬಿದ್ದಿರುವ ಮಣ್ಣು, ಕಲ್ಲುಗಳನ್ನು ತೆರವು ಕಾರ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here