ಸಂಪಾಜೆ : ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮನವಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ನಾಳೆಯೊಳಗೆ ಸರಿಪಡಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ 

 

ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಯನಾಡು ,ಚೆಡಾವು ,ಚಿಟ್ಟೆಕಾನ ,ಮಂಗಳಪಾರೆ ,ಭಾಗದಲ್ಲಿ ಸುಮಾರು 15 ದಿನಗಳಿಂದ ನಳ್ಳಿ ನೀರು ಸರಬರಾಜು ಆಗದೆ ಕುಡಿಯುವ ನೀರಿನ ಅಭಾವದಿಂದ ಈ ಭಾಗದ ನಿವಾಸಿಗಳು ಕಂಗಾಲಾಗಿದ್ದು,  ಸಾರ್ವಜನಿಕರಿಂದ ಪಂಚಾಯತ್ ಅಧಿಕಾರಿಗಳು ಮತ್ತು ಅಧ್ಯಕ್ಷರಿಗೆ ಇಂದು ಸಂಜೆಯ ಗಡುವು ನೀಡಿ ಮನವಿಯನ್ನು ಸಲ್ಲಿಸಿದ್ದಾರೆ .

ಇಂದು ಸಂಜೆಯೊಳಗೆ ಕುಡಿಯುವ ನೀರಿನ ಸಮಸ್ಯೆ ಸರಿಪಡಿಸದಿದ್ದರೆ ನಾಳೆ ಗ್ರಾಮಸ್ಥರೆಲ್ಲರೂ ಪಂಚಾಯತ್ ಮುತ್ತಿಗೆಯನ್ನು ಹಾಕುವಂತೆ ಎಚ್ಚರಿಕೆ ನೀಡಿದ್ದಾರೆ ಮತ್ತು ಆರಕ್ಷಕ ಠಾಣೆಗೆ ನಾಳೆ ಮುತ್ತಿಗೆ ಹಾಕುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ ಪಿ ಎಲ್ ,ಗ್ರಾಮಸ್ಥರಾದ ಹನೀಫ್ ಎಸ್ ಪಿ ,ವಾಸು ಪೂಜಾರಿ ,ರಮೇಶ್ ಕೊಯನಾಡು ,ಮನೋಹರ್ ಶೆಟ್ಟಿ ,ಪುನೀತ್ ,ಶ್ರೀಧರ್ ,ಶಿವು ,ಕೇಶವ ,ಅಶ್ವತ್ ,ನಾರಾಯಣ ,ಕುಮಾರ್ ಮತ್ತಿತರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.