ಪಕ್ಷದಿಂದ ಉಚ್ಛಾಟಿಸಲ್ಪಟ್ಟವರನ್ನು ಸೇರಿಸಿಕೊಳ್ಳುವುದು ಸರಿಯಲ್ಲ : ಎಲ್ಲವನ್ನು ನಾಯಕರು ಗಮನಿಸುತ್ತಾರೆ

0

 

ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಕೊಯಿಂಗಾಜೆ ಪ್ರತಿಕ್ರಿಯೆ

ಪಕ್ಷದಿಂದ ಉಚ್ಚಾಟಿಸಲ್ಪಟ್ಟವರನ್ನು ಸೇರಿಸಿಕೊಂಡು ಯಾರೂ ಕಾರ್ಯಕ್ರಮ ಮಾಡಬಾರದು.‌ ಅದು ಸರಿಯೂ ಅಲ್ಲ. ಪತ್ರಿಕಾಗೋಷ್ಠಿಯ ವರದಿಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದನ್ನು ನಾಯಕರು ಗಮನಿಸಿದ್ದಾರೆ ಎಂದು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ ಹೇಳಿದ್ದಾರೆ.

ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು. “ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಾವು ಭಾಗವಹಿಸಿದ್ದೇವೆ. ಪಕ್ಷದಿಂದ ಉಚ್ಚಾಟಿಸಲ್ಪಟ್ಟವರಿಗೆ ಬೆಂಬಲ ನೀಡುತ್ತಿರುವ ಇತರ ಸದಸ್ಯರ ಕುರಿತು ನಮ್ಮಲ್ಲಿಂದ ವರದಿಗಳು ಬ್ಲಾಕ್ ಗೆ ಹೋಗಿದೆ. ಅವರು ಮತ್ತು ಜಿಲ್ಲಾ ಸಮಿತಿ ಕ್ರಮಕೈಗೊಳ್ಳುತ್ತಾರೆ ಎಂದು ಹೇಳಿದರು.

LEAVE A REPLY

Please enter your comment!
Please enter your name here