ಪ್ರವೀಣ್ ನೆಟ್ಟಾರು ಹಂತಕರನ್ನು ಬೆಳ್ಳಾರೆಗೆ ಕರೆತಂದ ಪೊಲೀಸರು

0

 

ಪ್ರವೀಣ್ ನೆಟ್ಟಾರು ಹಂತಕರನ್ನು ಬೆಳ್ಳಾರೆಗೆ ಕರೆತಂದ ಪೊಲೀಸರು

ಮಾಸ್ತಿಕಟ್ಟೆಯ ಅಕ್ಷಯ ಚಿಕನ್ ಸೆಂಟರ್ ಬಳಿ ಸ್ಥಳ ಮಹಜರು

ಬೆಳ್ಳಾರೆಯಲ್ಲಿ ಪೊಲೀಸ್ ಸರ್ಪಗಾವಲು

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಇಂದು ಮಾಸ್ತಿಕಟ್ಟೆಗೆ ಸ್ಥಳ ಮಹಜರು ನಡೆಸಲು ಆರೋಪಿಗಳನ್ನು ಕರೆತಂದರು.

ಮಾಸ್ತಿಕಟ್ಟೆಗೆ ಬರುವ ಮೊದಲು ಅಂಕತಡ್ಕದಲ್ಲೂ ಮಹಜರು ನಡೆಸಿದರೆಂದು ತಿಳಿದುಬಂದಿದೆ.

 

ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಕರೆತರುತ್ತಿರುವ ಹಿನ್ನೆಲೆಯಲ್ಲಿ ಬಿಗು ಪೊಲೀಸ್ ಪಹರೆ ಏರ್ಪಡಿಸಲಾಗಿದೆ.