ಸುಳ್ಯ ನಗರ ಪಂಚಾಯತ್ ನಲ್ಲಿ ಹೆಚ್.ಡಿ.ಎಫ್.ಸಿ. ಯವರ ಕ್ಯಾಶ್ ಕೌಂಟರ್ ಆರಂಭ

0

 

ಸುಳ್ಯ ನಗರ ಪಂಚಾಯತ್ ಗೆ ಬರುವ ನಾಗರಿಕರಿಗೆ ವಿವಿಧ ಶುಲ್ಕ ಪಾವತಿಗಳಿಗೆ ಅನುಕೂಲವಾಗುವಂತೆ ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಕ್ಯಾಶ್ ಕೌಂಟರ್ ನಗರ ಪಂಚಾಯತ್ ನಲ್ಲಿ ಆರಂಭವಾಗಿದೆ.


ಪಂಚಾಯತ್ ನಲ್ಲಿ ಈಗಾಗಲೇ ಕ್ಯೂ ಆರ್ ಕೋಡ್ ಮುಖಾಂತರ ಪೇಮೆಂಟ್ ವ್ಯವಸ್ಥೆ ಜಾರಿಯಲ್ಲಿದ್ದು ನಗದು ಪಾವತಿ ಮಾಡುವವರು ಚಲನ್ ಪಡೆದು ಬ್ಯಾಂಕ್ ಗೆ ತೆರಳಿ ಪಾವತಿಸಬೇಕಾಗಿತ್ತು. ಈ ತೊಂದರೆಯನ್ನು ಮನಗಂಡು ಇದೀಗ ಬ್ಯಾಂಕ್ ಕೌಂಟರ್ ನ್ನು ಪಂಚಾಯತ್ ನಲ್ಲೆ ತೆರೆಯಲಾಗಿದ್ದು ಬೆಳಿಗ್ಗೆ 10.00ರಿಂದ 3.30ರ ತನಕ ಕಾರ್ಯಾಚರಿಸಲಿದೆ