ಬೆಳ್ಳಾರೆ ಯಲ್ಲಿ ಶುಭಾರಂಭ ಗೊಂಡ ಸಿಟಿ ಎಲೆಕ್ಟ್ರಾನಿಕ್ಸ್, ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ ಅಭಿವೃದ್ಧಿ ಪಥದತ್ತ ಸಾಗಲಿ :ಹಂಝ ತಂಙಳ್

0

 

 

ಪುತ್ತೂರಿನಲ್ಲಿ ಕಾರ್ಯಚರಿಸುತ್ತಾ ,ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದು ಪ್ರಸಿದ್ಧಿ ಪಡೆದ ಪುತ್ತೂರಿನ ಇಸಾಕ್ ಮಾಲಕತ್ವದ ಸಿಟಿ ಎಲೆಕ್ಟ್ರಾನಿಕ್ಸ್ ನ ಮೂರನೆ ಮಳಿಗೆ ಬೆಳ್ಳಾರೆ ಕೆನರಾ ಬ್ಯಾಂಕ್ ಬಳಿಯ ಬೆಳ್ಳಾರೆ ಕಾಂಪ್ಲೆಕ್ಸ್ ನಲ್ಲಿ ಆಗಸ್ಟ್ 11 ರಂದು ಲೋಕಾರ್ಪಣೆ ಗೊಂಡಿತು.

ಹಂಝ ತಂಙಳ್ ಪಾಟ್ರಕೋಡಿ ನೂತನ ಸಂಸ್ಥೆಯನ್ನು ಲೋಕಾರ್ಪಣೆ ಗೊಳಿಸಿ ದುವಾರ್ಶಿವಚನ ಗೈದರು. ಬಳಿಕ ಮಾತನಾಡಿದ ತಂಙಳ್ ,ಬೆಳೆಯುತ್ತಿರುವ ವಾಣಿಜ್ಯ ನಗರಿ ಬೆಳ್ಳಾರೆ ಯಲ್ಲಿ ಇಂತಹ ಸಂಸ್ಥೆ ಗಳು ಅವಶ್ಯಕ ವಾಗಿದೆ.ಗ್ರಾಹಕರ ಬೇಡಿಕೆಯನ್ನು ಪೂರೈಸುವಲ್ಲಿ ನಿರಂತರ ಪರಿಶ್ರಮ ಪಡುವರಾಗಬೇಕು ಅಲ್ಲದೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ ಅಭಿವೃದ್ಧಿ ಪಥದತ್ತ ಸಾಗಲಿಯೆಂದು ಶುಭಹಾರೈಸಿದರು.ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಮುಅದ್ಸಿನ್ ಹಸೈನಾರ್ ಮುಸ್ಲಿಯಾರ್ ,ಹಸನ್ ಸಖಾಫಿ ಬೆಳ್ಳಾರೆ, ಮಹಮ್ಮದ್ ಬಿಸ್ಮಿಲ್ಲಾ ಬೆಳ್ಳಾರೆ , ಅಶ್ರಫ್ ಪಾಟ್ರಕೋಡಿ , ಮಹಮ್ಮದ್ ದರ್ಖಾಸ್ , ಮಹಮ್ಮದ್ ಪಾಟ್ರಕೋಡಿ , ಕಟ್ಟಡ ಮಾಲಕ ಝುಬೈರ್ ಬೆಳ್ಳಾರೆ , ಆಸಿಫ್ ಪಾಟ್ರಕೋಡಿ , ರಮ್ಲ ಕುಂಞ ಪಾಟ್ರಕೋಡಿ, ಸಿಬ್ಬಂದಿಗಳಾದ ಜಾಬಿರ್ , ಸವಾದ್,ರಿಯಾಝ್ ಬೆರಿಕೆ ಸೇರಿದಂತೆ ಗ್ರಾಹಕ ಬಂಧುಗಳು ಉಪಸ್ಥಿತರಿದ್ದರು.ಇಲ್ಲಿ ಎಲೆಕ್ಟ್ರಾನಿಕ್ಸ್ ಗೆ ಸಂಬಂಧ ಪಟ್ಟ ಪ್ರಖ್ಯಾತ ಕಂಪೆನಿಯ ಎ ಟು ಝಡ್ಐಟಂಗಳು,ಬಜಾಜ್ ಫೈನಾನ್ಸ್ ಮುಖಾಂತರ ಸುಲಭವಾಗಿ ನಿಮ್ಮ ನೆಚ್ಚಿನ ಗೃಹಪಯೋಗಿ ವಸ್ತುಗಳನ್ನು ಮನೆಗೆ ಕೊಂಡೊಯ್ಯೊಬಹುದಲ್ಲದೆ ಗ್ರಾಹಕರಿಗೆ ತೃಪ್ತಿಕರವಾಗುವ ರೀತಿಯಲ್ಲಿ ಎಲ್ಲಾ ವಸ್ತುಗಳು ದೊರೆಯಲಿದೆ ಎಂದು ಸಿಟಿ ಎಲೆಕ್ಟ್ರಾನಿಕ್ಸ್ ಸಮೂಹ ಸಂಸ್ಥೆಯ ಮಾಲಕ ಇಸಾಕ್ ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

 

 

LEAVE A REPLY

Please enter your comment!
Please enter your name here