ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಸಂಸ್ಕಾರ ದೀಪಿಕೆ ಸಂಸ್ಕಾರ ಶಿಕ್ಷಣ ತರಗತಿಗಳು ಆರಂಭ

0

 

p>

ಮಕ್ಕಳಿಗೆ ಸುಲಭವಾದ ಶ್ಲೋಕಗಳು,ಆಚಾರ ವಿಚಾರ,ಕಥೆ,ಭಜನೆ ಹಾಗೂ ದೇಶಭಕ್ತಿಯ ವಿಚಾರಗಳನ್ನು ಕಲಿಸುವ ಉದ್ದೇಶದ ಸಂಸ್ಕಾರ ದೀಪಿಕೆ ಶಿಕ್ಷಣ ತರಗತಿಗಳು ಇಂದು ಸುಳ್ಯ ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ಆರಂಭಗೊಂಡಿತು.
ತರಗತಿಯನ್ನು ಸುಳ್ಯ ಕೇಶವ ಕೃಪಾದ ವೇದಮೂರ್ತಿ ಪುರೋಹಿತ ನಾಗರಾಜ ಭಟ್ ಉದ್ಘಾಟಿಸಿದರು.ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ,ಆರ್ಯಭಟ ಪ್ರಶಸ್ತಿ ಪುರಸ್ಕೃತ,ಗುರುರಾಘವೇಂದ್ರ ಮಠದ ಆಡಳಿತ ಅಧ್ಯಕ್ಷ ಎಂ.ಎನ್.ಶ್ರೀ ಕೃಷ್ಣ ಸೋಮಯಾಗಿ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು. ಶಿಬಿರದ ಸಂಘಟಕರಾದ ಮಧುಸೂದನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಕು.ಲಿಪಿಶ್ರೀ ಪ್ರಾರ್ಥಿಸಿದರು, ಶಿಬಿರದ ಸಂಯೋಜಕರಾದ ಡಾ. ಶ್ರೀ ಕೃಷ್ಣ ಬಿ.ಎನ್.ಸ್ವಾಗತಿಸಿ, ವೇದಮೂರ್ತಿ ವೆಂಕಟೇಶ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀಮತಿ ಲತಾ ಮಧುಸೂದನ್ ವಂದಿಸಿದರು. ನಿವೃತ್ತ ಶಿಕ್ಷಕ ಅಚ್ಯುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here