ಕಲ್ಲುಗುಂಡಿ: ನೆರೆಹಾನಿ ಪೀಡಿತ ಮನೆಯವರಿಗೆ ಕೆ.ಪಿ.ಸಿ.ಸಿ. ಸಂಯೋಜಕ ನಂದಕುಮಾರ್ ವತಿಯಿಂದ ಆಹಾರಧಾನ್ಯಗಳ ಕಿಟ್ ವಿತರಣೆ

0

 

ಮಾಜಿ ಸಚಿವ ರಮಾನಾಥ ರೈಯವರಿಂದ ವಿತರಣೆ

ಕಲ್ಲುಗುಂಡಿಯಲ್ಲಿ ನೆರೆಹಾನಿಗೊಳಗಾದ ಮನೆಯವರಿಗೆ ಕೆ.ಪಿ.ಸಿ.ಸಿ. ಸಂಯೋಜಕ ನಂದಕುಮಾರ್ ಮಡಿಕೇರಿ ಅವರು ನೀಡಿದ ಆಹಾರ ಧಾನ್ಯಗಳ ಕಿಟ್ಟನ್ನು ಮಾಜಿ ಸಚಿವ ರಮಾನಾಥ ರೈ ಅವರು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಆ.11ರಂದು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಸುಳ್ಯ ಬ್ಲಾಕ್ ಉಸ್ತುವಾರಿ ಜಿ.ಕೃಷ್ಣಪ್ಪ ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ,ಮಾಜಿ ಕೆಪಿಸಿಸಿ ಕಾರ್ಯದರ್ಶಿ ಗಳಾದ ಟಿ.ಎಮ್.ಶಹೀದ್ ,ಭರತ್ ಮುಂಡೋಡಿ,ವೆಂಕಪ್ಪ ಗೌಡ,ಡಾ.ರಘ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್,ಸುಳ್ಯ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್ ಗಂಗಾಧರ ,ಸಚಿನ್ ರಾಜ್ ಶೆಟ್ಟಿ ,ತಾಜ್ ಮಹಮ್ಮದ್,ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ರಾದ ಪಿಕೆ ಅಬುಸಾಲಿ ,ಜಗದೀಶ್ ರೈ,ಎಸ್.ಕೆ.ಹನೀಫ್, ಸಹಕಾರಿ ಸಂಘದ ನಿರ್ದೇಶರುಗಳಾದ ಶ್ರೀಮತಿ ಯಮುನ, ಶ್ರೀಮತಿ ಸುಮತಿ ಶಕ್ತಿವೇಲು, ಗ್ರಾ.ಪಂ. ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಕಾಂಗ್ರೆಸ್ ಮುಖಂಡರುಗಳಾದ ಸಂಶುದ್ಧೀನ್ ಬೆಂಜಮಿನ್ ಡಿಸೋಜ, ಕೆ.ಎಂ. ಮುಸ್ತಫಾ, ಸಿಲ್ವಿಸ್ಟರ್ ಡಿಸೋಜ, ಗ್ರಾ.ಪಂ.‌ಸದಸ್ಯ ಶೌವಾದ್ ಗೂನಡ್ಕ,ಸದಾನಂದ ಮಾವಜಿ,ಭವಾನಿಶಂಕರ್ ಕಲ್ಮಡ್ಕ,ದಿನೇಶ್ ಅಂಬೆಕಲ್ಲು,ಶ ಶಿಧರ ಎಂ.ಜಿ,ಶಾಫಿ ಕುತ್ತಮೊಟ್ಟೆ, ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿಮಲಾ ಪ್ರಸಾದ್, ಅನುಪಮಾ, ಕಾಂಗ್ರೆಸ್ ಮುಖಂಡರುಗಳಾದ ಜ್ಞಾನಶೀಲನ್ ನೆಲ್ಲಿಕುಮೇರಿ, ಎ.ಕೆ.ಇಬ್ರಾಹಿಂ, ಕೆ.ಎಂ.ಅಶ್ರಫ್, ಎಚ್.ಎ.ಹಮೀದ್, ರುಡಾಲ್ಫ್ ಕ್ರಾಸ್ತಾ, ಟಿ.ಐ.ಲೂಕಾಸ್, ಎ.ಕೆ.ಹನೀಫ್, ಕಾಂತಿ ಬಿ.ಎಸ್. ಮೊದಲಾದವರು ಇದ್ದರು.ಕೂಲಿಶಡ್ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅಹುತಿಯಾದ ಅಂಗಡಿ ಮಾಲಿಕರಿಗೆ ಧನ ಸಹಾಯ ನೀಡಲಾಯಿತು.