ದ. ಕ. ಸಂಪಾಜೆ ಸಹಕಾರಿ ಸಂಘದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ ಗೆ ಚಾಲನೆ

0

 

 

ದ. ಕ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ತನ್ನ ಸದಸ್ಯರಿಗೆ ಎಲೆಕ್ಟ್ರಿಕ್ ವಾಹನ ಖರೀದಿಗೆ 1% ರ ಬಡ್ಡಿ ರಿಯಾಯಿತಿಯಲ್ಲಿ ವಾಹನ ಸಾಲವನ್ನು ನೀಡುತ್ತಿದ್ದು ಇದೀಗ ಒಂದು ಹೆಜ್ಜೆ ಮುಂದು ಹೋಗಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ನ್ನು ಲೋಕಾರ್ಪಣೆ ಮಾಡಲಾಯಿತು.

ಮೈಸೂರು – ಮಾಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ಎಲೆಕ್ಟ್ರಿಕ್ ವಾಹನಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಸೌರಶಕ್ತಿ ಆಧಾರಿತ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ ನ್ನು ಇತ್ತೀಚೆಗೆ ಸಂಘದ ಅಧ್ಯಕ್ಷರಾದ ಸೋಮಶೇಖರ ಕೋಯಿಂಗಾಜೆ ರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್, ನಿರ್ದೇಶಕರಾದ ಗಣಪತಿ ಭಟ್, ಆನಂದ ಪಿ ಎಲ್, ಜಗದೀಶ ರೈ, ಹಮೀದ್ ಎಚ್, ಚಂದ್ರಶೇಖರ ಕೆ ಯು, ಪ್ರಕಾಶ್ ಕೆ ಪಿ, ಉಷಾ ಕೆ ಎಂ, ಸುಮತಿ ಎಸ್, ಯಮುನಾ ಬಿ ಎಸ್ ಹಾಗೂ ರಾಜೀವಿ ಬೈಲೆ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

 

ಸಂಘದಲ್ಲಿ ದ್ವಿಚಕ್ರ, ತ್ರಿಚಕ್ರ ಹಾಗೂ ಕಾರುಗಳಿಗೆ ಅತ್ಯಂತ ಸುಲಭ ವಿಧಾನದಲ್ಲಿ ಪರಿಸರ ಸ್ನೇಹಿ ಮಾಲಿನ್ಯ ರಹಿತವಾದ ಎಲೆಕ್ಟ್ರಿಕ್ ಚಾರ್ಜಿಂಗ್ ಮಾಡಿಕೊಡಲಾಗುತ್ತಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here