ಎಲಿಮಲೆಯಲ್ಲಿ ದೇಶಭಕ್ತಿ ಗಾಯನ ಅಭಿಯಾನದ 10ನೇ ಕಾರ್ಯಕ್ರಮ

0

 

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಭಾವನಾ ಸುಗಮ ಸಂಗೀತ ಬಳಗ ಸುಳ್ಯ ಸಹಯೋಗದಲ್ಲಿ ನಡೆಯುತ್ತಿರುವ ದೇಶಭಕ್ತಿ ಗೀತೆ ಗಾಯನ ಅಭಿಯಾನ-2022 ಸರಣಿಯ 10ನೇ ಕಾರ್ಯಕ್ರಮ ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ನಡೆಯಿತು.ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾದ ಶೈಲೇಶ್ ಅಂಬೆಕಲ್ಲು ಕಾರ್ಯಕ್ರಮವನ್ನು ಉದ್ಘಾಟಿಸಿ
“ದೇಶಪ್ರೇಮ ಮತ್ತು ನಮ್ಮ ಸಂಸ್ಕೃತಿ ಎರಡನ್ನು ನಾವು ಮರೆಯುತ್ತಿದ್ದೇವೆ.ದೇಶಭಕ್ತಿ ಗೀತೆ ಗಾಯನದಂಥ ಕಾರ್ಯಕ್ರಮಗಳು ವಿದ್ಯಾರ್ಥಿಗಳು ನಮ್ಮ ದೇಶದ ಭವ್ಯ ಪರಂಪರೆ-ಸಂಸ್ಕೃತಿಯತ್ತ ಆಸಕ್ತಿ ವಹಿಸಲು ಪ್ರೇರಣೆ ನೀಡುತ್ತವೆ.ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೀವ ತೆತ್ತ ಮಹಾನ್ ನಾಯಕರ ಜೀವನ ದೇಶವನ್ನು ಪ್ರಗತಿಯತ್ತ ಮುನ್ನಡೆಸಲು ನಮಗೆ ಮಾರ್ಗದರ್ಶಕ .” ಎಂದು ಹೇಳಿದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಜಯಂತ ಹರ್ಲಡ್ಕ ಸಭಾಧ್ಯಕ್ಷತೆಯನ್ನು ವಹಿಸಿದ್ದರು.ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ,ಭಾವನಾ ಸುಗಮ ಸಂಗೀತ ಬಳಗದ ನಿರ್ದೇಶಕ, ಗಾಯಕ ಶ್ರೀ ಕೆ.ಆರ್.ಗೋಪಾಲಕೃಷ್ಣ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಸದಸ್ಯರಾದ ರಾಮಚಂದ್ರ ಪಲ್ಲತಡ್ಕ,ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾಕುಮಾರ್,ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಧನಂಜಯ ಬಾಳೆತೋಟ,ಲೀಲಾಧರ್ ಹಾಗೂ ಅಚ್ಚುತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತೇಜಸ್ವಿ ಕಡಪಳ ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು.
ಸಹ ಶಿಕ್ಷಕ ವಿರೂಪಾಕ್ಷಪ್ಪ ಧನ್ಯವಾದಗೈದರು.
ಸಹ ಶಿಕ್ಷಕ
ವಸಂತ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಕೆ.ಆರ್.ಗೋಪಾಲಕೃಷ್ಣ ,ಕುಮಾರಿ ಶುಭದಾ ಆರ್.ಪ್ರಕಾಶ್, ಕುಮಾರಿ ಲಿಪಿ ಶ್ರೀ, ಮಯೂರ್ ಅಂಬೆಕಲ್ಲು ಹಾಗೂ ಶಮಾ ಅಂಬೆಕಲ್ಲು ಇವರಿಂದ ದೇಶಭಕ್ತಿ ಗೀತೆಗಳ ಗಾಯನ ಜರುಗಿತು.

 

LEAVE A REPLY

Please enter your comment!
Please enter your name here