ಜಟ್ಟಿಪಳ್ಳ ಮಾನಸ ಮಹಿಳಾ ಮಂಡಲ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ

0

 

p>

ಸುಳ್ಯದ ಜಟ್ಟಿಪಳ್ಳದ ಮಾನಸ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಆ.7 ರಂದು ಜಟ್ಟಿಪಳ್ಳದ ಯುವಸದನದಲ್ಲಿ ಜರುಗಿತು.

ಸುಳ್ಯ ನಗರ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸರೋಜಿನಿ ಪುರುಷೋತ್ತಮ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೆವಿಜಿ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕಿ ಶ್ರೀಮತಿ ಅರ್ಚನಾ ಆರ್. ರೈ ಆಗಮಿಸಿ ಪ್ರಮಾಣ ವಚನ ಬೋಧಿಸಿದರು. ಮಹಿಳಾ ಮಂಡಲದ ಸಲಹೆಗಾರ ರಘುನಾಥ ಜಟ್ಟಿಪಳ್ಳ , ಗೌರವಾಧ್ಯಕ್ಷೆ ಶ್ರೀಮತಿ ಚಂದ್ರಾಕ್ಷಿ ಜೆ. ರೈ ಉಪಸ್ಥಿತರಿದ್ದರು. ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಸುನೀತ ರಾಮಚಂದ್ರ ಸಭಾಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಜಯಂತಿ ರೈ ಪ್ರಾರ್ಥಿಸಿದರು. ಶ್ರೀಮತಿ ಸವಿತಾ ಲಕ್ಷ್ಮಣ ಸ್ವಾಗತಿಸಿದರು. ಶ್ರೀಮತಿ ದೀಪಾ ವಿಜಯಕುಮಾರ್ ವರದಿ ವಾಚಿಸಿ, ಶ್ರೀಮತಿ ಭಾರತಿ ಬಂಟ್ವಾಳ್ ಲೆಕ್ಕಪತ್ರ ಮಂಡಿಸಿದರು.
ನೂತನ ಅಧ್ಯಕ್ಷೆ ರೇವತಿ ಗೋಪಾಲ, ಕಾರ್ಯದರ್ಶಿ ಶೈಲಜ ಪಿ. ರೈ, ಖಜಾಂಚಿ ಪಾರ್ವತಿ ನಾರಾಯಣ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲು ಸದಸ್ಯರಿಗೆ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.

 

LEAVE A REPLY

Please enter your comment!
Please enter your name here