ಸುಳ್ಯದ ಶ್ರೀರಾಂಪೇಟೆಯಲ್ಲಿ ಬೈಕ್ ಹಾಗೂ ಸ್ಕೂಟಿ ಅಪಘಾತ

0

ಸುಳ್ಯದ ಶ್ರೀರಾಂಪೇಟೆಯಲ್ಲಿ ಬೈಕ್ ಹಾಗೂ ಸ್ಕೂಟಿ ಅಪಘಾತ ಸಂಭವಿಸಿ, ಗಾಯಾಳುಗಳನ್ನು  ಆಸ್ಪತ್ರೆಗೆ ದಾಖಲಿಸಿದ ಘಟನೆ ಸಂಭವಿಸಿದೆ.

ಶ್ರೀರಾಂಪೇಟೆ ರೈ ಗ್ಯಾಸ್ ಡಿಸ್ಟ್ರಿಬ್ಯೂಟರ್ ಕಚೇರಿ ಮುಂಭಾಗ ಬೈಕ್ ಮತ್ತು ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿ ಎರಡು ವಾಹನಗಳ ಸವಾರರು ಗಾಯಗೊಂಡು ಸುಳ್ಯ ಸ್ಥಳೀಯರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕುರುಂಜಿ ಬಾಗ್ ನಿವಾಸಿ ಹರೀಶ್ ಎಂಬುವವರು ಗ್ಯಾಸ್ ಏಜೆನ್ಸಿ ಕಚೇರಿಯಿಂದ ಮುಖ್ಯ ರಸ್ತೆಗೆ ಬರುತ್ತಿದ್ದ ಸಂದರ್ಭ ಸುಳ್ಯದಿಂದ ಹಳೆ ಗೇಟು ಕಡೆ ಹೋಗುತ್ತಿದ್ದ ದಿವಾಕರ್ ಎಂಬುವವರ ಬೈಕ್ ಡಿಕ್ಕಿಯಾಗಿ ಎರಡು ವಾಹನ ಸವಾರರು ರಸ್ತೆಗೆ ಬಿದ್ದರು ಎನ್ನಲಾಗಿದೆ.
ಈ ವೇಳೆ ಇಬ್ಬರಿಗೂ ಗಾಯವಾಗಿದ್ದು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ.