ಅಮರಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪೂರ್ವ ಭಾವಿ ಸಿದ್ಧತೆ

0

 

 

ಅಮರಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆ.15 ರಂದು ನಡೆಯಲಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಮನೆ ಮನೆಗಳಿಗೆ ರಾಷ್ಟ್ರ ಧ್ವಜ ವಿತರಿಸುವ ಸಲುವಾಗಿ ಪೂರ್ವ ಭಾವಿ ಸಿದ್ಧತೆಯು ಆ.11 ರಂದು ನಡೆಯಿತು.


ಸಂಜೀವಿನಿ ಒಕ್ಕೂಟದ ಸದಸ್ಯರು ಧ್ವಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಬಳಿಕ ಶೇಣಿ ,ದೊಡ್ಡತೋಟ, ಪೈಲಾರು, ಕುಕ್ಕುಜಡ್ಕ ಪರಿಸರದಲ್ಲಿ ಮನೆ ಮನೆಗೆ ರಾಷ್ಟ್ರಧ್ವಜ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಪದ್ಮಪ್ರಿಯ ಮೇಲ್ತೋಟ, ಸದಸ್ಯರಾದ ಅಶೋಕ ಚೂಂತಾರು, ಸೀತಾ ಹೆಚ್, ಮೀನಾಕ್ಷಿ, ಹೂವಪ್ಪ ಗೌಡ ಆರ್ನೋಜಿ,ಭುವನೇಶ್ವರಿ, ರಾಧಾಕೃಷ್ಣ ಕೊರತ್ಯಡ್ಕ, ಕೃಷ್ಣ ಪ್ರಸಾದ್ ಮಾಡಬಾಕಿಲು,ದಿವ್ಯ ಮಡಪ್ಪಾಡಿ, ತೇಜಾವತಿ, ಪಿ.ಡಿ.ಒ.ಆಕಾಶ್ ,ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಮಾಧವ,ಹೇಮಚಂದ್ರ,
ಈಶ್ವರ,ರಾಮಚಂದ್ರ,
ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪುಷ್ಪಾವತಿ, ಎಂ.ಬಿ.ಕೆ. ಮೋಹಿನಿ ಪದವು, ಲಲಿತಾಲಕ್ಷ್ಮೀ,ಮೋಹಿನಿ
ಆಶಾ ಕಾರ್ಯಕರ್ತೆ ರತ್ನಾವತಿ,ಯೋಗಿನಿ,
ಮುಖ್ಯ ಶಿಕ್ಷಕ ಬಾಬು, ಮುಖ್ಯ ಶಿಕ್ಷಕಿ ರೂಪವಾಣಿ,ಚಂದ್ರಾವತಿ, ಹೇಮಲತಾ, ಹಾಗೂ ಆಶಾ ಕಾರ್ಯಕರ್ತೆಯರು, ಶಿಕ್ಷಕ ವೃಂದದವರು, ಪೋಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.