ಅರಂತೋಡಿನ ಬಾಲಕಿಯ ಚಿಕಿತ್ಸೆಗೆ ಕಲ್ಲುಗದ್ದೆ ಆನಂದ ಮತ್ತು ಅರಂತೋಡು ವಾಹನ ಮಾಲಕ ಚಾಲಕರಿಂದ ಧನಸಹಾಯ

0

 

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅರಂತೋಡಿನ ಖುಷಿ ಅವರ ಚಿಕಿತ್ಸೆಗೆ ಹಲವಾರು ಮಂದಿ ಆರ್ಥಿಕ ನೆರವು ನೀಡಿ ಸಹಕರಿಸಿದ್ದಾರೆ.


ಅರಂತೋಡಿನಲ್ಲಿ ಹೋಟೆಲ್ ನಡೆಸುತ್ತಿರುವ ಯೋಗೀಶ್ ಎಂಬವರ ಪುತ್ರಿ ಖುಷಿ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಬಗ್ಗೆ ನೆರವು ನೀಡಬೇಕೆಂದು ಸುದ್ದಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿ ಹಲವಾರು ಮಂದಿ ಆರ್ಥಿಕ ಸಹಾಯ ನೀಡಿದ್ದಾರೆ.
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಕಲ್ಲುಗದ್ದೆ ಆನಂದ ರೂ.50ಸಾವಿರ, ಅರಂತೋಡು ವಾಹನ ಮಾಲಕ ಚಾಲಕ ಸಂಘದವರು ರೂ.25 ಸಾವಿರ ನೀಡಿ ನೆರವಾಗಿದ್ದಾರೆ.