ಜೆ ಇ ಇ ಹಾಗೂ ಸಿ ಇ ಟಿ ಪರೀಕ್ಷೆ ಯಲ್ಲಿ ಸುಳ್ಯ ರೋಟರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಯ ಅತ್ತ್ಯುತ್ತಮ ಸಾಧನೆ

0

 

ರೋಟರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ,ಜಾಲ್ಸೂರಿನ ಮೋಹನ ಭಟ್ ಬಿ ಮತ್ತು ಗೀತಾ ಬಿ ಯವರ ಪುತ್ರ ಹರ್ಷಿತ್ ಬಿ 2021-22 ನೇ ಸಾಲಿನ ರಾಷ್ಟ್ರಮಟ್ಟದ ಜೆ ಇ ಇ ಮೈನ್ಸ್ ಪರೀಕ್ಷೆಯಲ್ಲಿ 96.68 ಪರ್ಸೆಂಟೈಲ್ ಸ್ಕೋರ್ ಮತ್ತು ಸಿಇಟಿ ಪರೀಕ್ಷೆ ಇಂಜಿನಿಯರಿಂಗ್ ವಿಭಾಗ ದಲ್ಲಿ 1257 ನೇ rank ಪಡೆದು ವಿದ್ಯಾ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಇವರ ಅತ್ಯುತ್ತಮ ಸಾಧನೆಗೆ ಸಂಸ್ಥೆಯ ಸಂಚಾಲಕರು ರೊಟರಿ ಚಾರಿಟೇಬಲ್ ಟ್ರಸ್ಟ್ ನ ಚೇರ್ಮನ್ ಹಾಗೂ ಸದಸ್ಯರು, ಸಂಸ್ಥೆಯ ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿರುತ್ತಾರೆ.
ಈತ 2021-22 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲೂ 600 ಕ್ಕೆ 586 ಅಂಕಗಳನ್ನು ಪಡೆದು ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನಿ.

LEAVE A REPLY

Please enter your comment!
Please enter your name here