ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ‘ಸಂಗ್ರಾಮ ಸ್ವಾತಂತ್ರ್ಯ ಸಂಭ್ರಮ’ ಕಾರ್ಯಕ್ರಮ

0

 

ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ “ಆಜಾದಿ ಕಾ ಅಮೃತ ಮಹೋತ್ಸವ”ದ ಅಂಗವಾಗಿ ೫ ದಿನಗಳ ಆಚರಣೆಯನ್ನು ಶಾಲೆಯಲ್ಲಿ ಆಯೋಜಿಸಲಾಯಿತು.
ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷರಾದ ರುಕ್ಮಯ್ಯ ದಾಸ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
“ಸಂಗ್ರಾಮ (೧೮೫೭) ಸ್ವಾತಂತ್ರ್ಯ(೧೯೪೭) ಸಂಭ್ರಮ (೨೦೨೨)” ಎಂಬ ಶೀರ್ಷಿಕೆಯಡಿ ಈ ಕಾರ್ಯಕ್ರಮವು ನಡೆಯುತ್ತಿದ್ದು, ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಹಾಕಲು ಇದೊಂದು ಸುವರ್ಣಾವಕಾಶ ಮತ್ತು ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ದಿನವಾಗಿ ನೆನಪಿನಲ್ಲುಳಿಯಲು ಸಾಧ್ಯವಾಗುತ್ತದೆ. ಹಾಗಾಗಿ ಆಗಸ್ಟ್ ೧೦ ರಿಂದ ೧೫ ರವರೆಗೆ ವಿದ್ಯಾರ್ಥಿಗಳಿಗಾಗಿ ೭೫ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದೇವೆ ಎಂದು ಶಾಲಾ ಪ್ರಾಂಶುಪಾಲರಾದ ಶೋಭಾ ಕಿಶೋರ್ ನುಡಿದರು. ಶಾಲಾ ಆವರಣವನ್ನು ತ್ರಿವರ್ಣಗಳಿಂದ ಅಲಂಕರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ರುಕ್ಮಯ್ಯ ದಾಸ್, ಲೀಲಾವತಿ ರುಕ್ಮಯ್ಯ ದಾಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬುಸಾಲಿ, ಶಿಕ್ಷಕ ರಕ್ಷಕ ಸಂಘದ ಸದಸ್ಯರಾದ ವೆಂಕಟರಮಣ, ಪ್ರಾಂಶುಪಾಲರಾದ ಶೋಭಾ ಕಿಶೋರ್, ವಿದ್ಯಾರ್ಥಿಗಳು ಮತ್ತು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.