ಮಸೂದ್ ಕುಟುಂಬಕ್ಕೆ ಮಂಗಳೂರಿನ ಸೆಂಟ್ರಲ್ ಮುಸ್ಲಿಂ ಕಮಿಟಿಯಿಂದ 30 ಲಕ್ಷ ರೂ ಪರಿಹಾರ ಹಸ್ತಾಂತರ

0

 

 

ಪ್ರವೀಣ್ ಕುಟುಂಬಕ್ಕೂ ನೆರವು ನೀಡಲು ಸಿದ್ಧ : ಕಮಿಟಿ ಘೋಷಣೆ

ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಕಳಂಜದ ಮಸೂದ್ ಕುಟುಂಬಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ 30 ಲಕ್ಷ ರೂ ಪರಿಹಾರದ ಚೆಕ್ ವಿತರಿಸಲಾಗಿದೆ.

ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ. ಎಸ್. ಮುಹಮ್ಮದ್ ಮಸೂದ್ ನೇತೃತ್ವದ ತಂಡ ಬಂದು ಚೆಕ್ ವಿತರಿಸಿತು.

ಈ ಸಂದರ್ಭ ಮಾತನಾಡಿದ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ. ಎಸ್. ಮುಹಮ್ಮದ್ ಮಸೂದ್, ಸುರತ್ಕಲ್ ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಳಾದ ಫಾಝಿಲ್ ಕುಟುಂಬಕ್ಕೆ ಕೂಡ 30 ಲಕ್ಷ ರೂ. ಪರಿಹಾರ ನೀಡಲಾಗಿದೆ. ಪ್ರವೀಣ್ ಕುಟುಂಬಕ್ಕೂ ಪರಿಹಾರ ನೀಡಲು ನಾವು ನಿರ್ಧರಿಸಿದ್ದೇವೆ. ಅವರ ಕುಟುಂಬಸ್ಥರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಸದ್ಯದ ಪರಿಸ್ಥಿತಿ ಹಿನ್ನೆಲೆ ಕುಟುಂಬಸ್ಥರು ಭೇಟಿ ನಿರಾಕರಿಸಿದ್ದರಿಂದ ಮುಂದಿನ ದಿನಗಳಲ್ಲಿ ಅವರು ಒಪ್ಪಿದಲ್ಲಿ ಪ್ರವೀಣ್ ಕುಟುಂಬಕ್ಕೂ ಪರಿಹಾರ ನೀಡಲಾಗುವುದು” ಎಂದು ಸ್ಪಷ್ಟಪಡಿಸಿದರು.

 


ಈ ಸಂದರ್ಭದಲ್ಲಿ ಮಾಜಿ ಮೇಯರ್ ಅಶ್ರಫ್, ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ, ಅಬ್ದುಲ್ ಗಫೂರ್ ಕಲ್ಮಡ್ಕ, ಹನೀಫ್ ಸಾಹೇಬ್ ಪಾಜಪಳ್ಳ, ಸಮಿತಿಯ ಉಪಾಧ್ಯಕ್ಷರುಗಳಾದ ಮಾಜಿ ಮೇಯರ್ ಅಶ್ರಫ್, ಮಮ್ತಾಜ್ ಅಲಿ, ಇಬ್ರಾಹಿಂ ಹಾಜಿ ಕೌಡಿ ಚಾಲ್, ಪಿ ಮಹಮ್ಮದ್ ಹಾಜಿ, ಪ್ರಧಾನ ಕಾರ್ಯದರ್ಶಿ ಅನೀಫ್ ಹಾಜಿ ಮೊದಲಾದವರಿದ್ದರು.