ಜಾಲ್ಸೂರು: ಸಂಧ್ಯಾಚೇತನ ಹಿರಿಯ ನಾಗರಿಕ ಸಂಘದ ವತಿಯಿಂದ ಅಟಿ ಆಚರಣೆ

0

 

ಹಿರಿಯ ನಿವೃತ್ತ ಶಿಕ್ಷಕ ಕೇಪು ಸುಂದರ ಮಾಸ್ತರ್ ದಂಪತಿ ಹಾಗೂ ಸೋಮಶೇಖರ ಕಟ್ಟೆಮನೆ ಮತ್ತು ಜಾಲ್ಸೂರಿನ ಮೆಸ್ಕಾಂ ಸಿಬ್ಬಂದಿಗಳಿಗೆ ಸಂಘದ ವತಿಯಿಂದ ಸನ್ಮಾನ

ಸುಳ್ಯ ತಾಲೂಕು ಸಂಧ್ಯಾಚೇತನ ಹಿರಿಯ ನಾಗರಿಕ ಸಂಘದ ಜಾಲ್ಸೂರು ಘಟಕದ ವತಿಯಿಂದ ಆಟಿ ಆಚರಣೆ ಹಾಗೂ ಸನ್ಮಾನ ಕಾರ್ಯಕ್ರಮವು ಜಾಲ್ಸೂರು ಗ್ರಾ.ಪಂ. ಸಭಾಭವನದಲ್ಲಿ ಆ.12ರಂದು ನಡೆಯಿತು.


ಸುಳ್ಯ ತಾಲೂಕು ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಬಾಪೂ ಸಾಹೇಬ್ ಅವರು ಆಟಿಕೂಟವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಪಯಸ್ವಿನಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಜಾಕೆ ಸದಾನಂದ ಅವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯರಾದ ನಿವೃತ್ತ ಶಿಕ್ಷಕ ಕೇಪು ಸುಂದರ ಮಾಸ್ತರ್ ದಂಪತಿಗಳನ್ನು ಹಾಗೂ ಜಾಲ್ಸೂರಿನ ಮೆಸ್ಕಾಂ ಲೈನ್ ಮೆನ್ ಸಿಬ್ಬಂದಿಗಳಾದ ತಿಮ್ಮಪ್ಪ, ಸಿದ್ಧು, ಈರಯ್ಯ ಹಾಗೂ ಇತ್ತೀಚೆಗೆ ಹರಿಹರ ಪಲ್ಲತ್ತಡ್ಕದಲ್ಲಿ ಜೀವದ ಹಂಗು ತೊರೆದು ಹರಿಯುವ ನೀರಿನಲ್ಲಿ ಕ್ರೇನ್ ಚಾಲಕನ ಜೀವರಕ್ಷಿಸಿದ ಸೋಮಶೇಖರ ಕಟ್ಟೆಮನೆ ಕೂಜುಗೋಡು ಅವರನ್ನು
ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ದಾಮೋದರ ಗೌಡರು ಆಟಿ ಆಚರಣೆಯ ಕುರಿತು ಮಾತನಾಡಿದರು. ಕ್ಷೇತ್ರ ಸಮನ್ಮಯಾಧಿಕಾರಿ ಚಂದ್ರಶೇಖರ ಪೇರಾಲು ಅವರು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಜಾಲ್ಸೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ, ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ತಾಲೂಕು ಕಾರ್ಯದರ್ಶಿ ರಾಮಚಂದ್ರ, ಖಜಾಂಜಿ ಚಂದ್ರಹಾಸ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಆಟಿಯ ವಿಶೇಷ ಖಾದ್ಯಗಳ ಸಹಭೋಜನ ಜರುಗಿತು. ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ಸಂಯೋಜಕರಾದ ಚೆನ್ನಕೇಶವ ಜಾಲ್ಸೂರು ಅವರು ಸ್ವಾ, ಕಾರ್ಯಕ್ರಮ ನಿರೂಪಿಸಿರು. ತಾಲೂಕು ಕಾರ್ಯದರ್ಶಿ ರಾಮಚಂದ್ರ ಅವರು ವಂದಿಸಿದರು.