ಸುಬ್ರಹ್ಮಣ್ಯ ಲಯನ್ಸ್ ಕ್ಲಬ್‌ ವತಿಯಿಂದ ತೇಜಕುಮಾರ್ ಮನೆಯವರಿಗೆ 2 ಲಕ್ಷ

0

 

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್‌ ವತಿಯಿಂದ ಇತ್ತೀಚೆಗೆ ಬರೆ ಜರಿದು ಮನೆ ಕಳೆದುಕೊಂಡ ತೇಜಕುಮಾರ್ ಕಜ್ಜೋಡಿ ಮನೆಯವರಿಗೆ ಇಂದು 2 ಲಕ್ಷ ವಿತರಿಸಲಾಯಿತು. ತಾರಾಮತಿ ಕಜ್ಜೋಡಿ ಹಣ ಸ್ವೀಕರಿಸಿದರು.


ಲಯನ್ಸ್ ಅಧ್ಯಕ್ಷ ರಂಗಯ್ಯ ಶೆಟ್ಟಿಗಾರ್, ಕಾರ್ಯದರ್ಶಿ ಸತೀಶ್ ಕೂಜುಗೋಡು, ಕೋಶಾಧಿಕಾರಿ ರಾಮಚಂದ್ರ ಪಳಂಗಾಯ, ಮೋಹನ್‌ದಾಸ್ ರೈ, ವಿಮಲಾ ರಂಗಯ್ಯ, ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು ಮತ್ತಿತರರು ಉಪಸ್ಥಿತರಿದ್ದರು.

 

 

ಇದೇ ಸಂದರ್ಭ ಹರಿಹರ ಪಲ್ಲತಡ್ಕದ ದುರಂತ ನಡೆದು ಮರಗಳ ತೆರವು ವೇಳೆ ಕ್ರೇನ್ ಚಾಲಕ ನೀರಿಗೆ ಬಿದ್ದಿರುವ ಸಂದರ್ಭ ಅವರನ್ನು ಪ್ರಾಣ ರಕ್ಷಣೆ ಮಾಡಿದ ಸೋಮಶೇಖರ ಕಟ್ಟೆಮನೆ ಅವರನ್ನು ಸನ್ಮಾನಿಸಲಾಯಿತು.