ಕನಕಮಜಲು ಯುವಕ ಮಂಡಲದ ವತಿಯಿಂದ ಕೆಸರಗದ್ದೆ ಕ್ರೀಡಾಕೂಟ

0

 

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನಕಮಜಲು ಗ್ರಾಮ ಪಂಚಾಯತಿ, ಕನಕಮಜಲು ಯುವಕ ಮಂಡಲದ ಸಂಯುಕ್ತ ಆಶ್ರಯದಲ್ಲಿ ಕೆಸರುಗದ್ದೆ ಕ್ರೀಡಾಕೂಟವು ಕನಕಮಜಲಿನ ಶ್ರೀರಾಮಪೇಟೆ ಬಳಿಯಿರುವ ಶಾಂತ್ಯಡ್ಕ ಗದ್ದೆಯಲ್ಲಿ ಆ.7ರಂದು ಜರುಗಿತು.

 


ಕ್ರೀಡಾಕೂಟವನ್ನು ಯುವಕ ಮಂಡಲದ ಪೂರ್ವಾಧ್ಯಕ್ಷ ಸುರೇಶ್ ಗೌಡ ಕುದ್ಕುಳಿ ಉದ್ಘಾಟಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಕುತ್ಯಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಎಲ್ಯಣ್ಣ ಗೌಡ ಶಾಂತ್ಯಡ್ಕ, ಯುವಕ ಮಂಡಲದ ಅಧ್ಯಕ್ಷ ಬಾಲಚಂದ್ರ ನೆಡಿಲು, ಪ್ರ.ಕಾರ್ಯದರ್ಶಿ ಹರ್ಷಿತ್ ಉಗ್ಗಮೂಲೆ, ಕ್ರೀಡಾ ಕಾರ್ಯದರ್ಶಿ ಚೇತನ್ ನೆಡಿಲು ಉಪಸ್ಥಿತರಿದ್ದರು.


ಬಳಿಕ ಕನಕಮಜಲು ಗ್ರಾಮಸ್ಥರಿಗೆ ಹಗ್ಗಜಗ್ಗಾಟ, ನಿಧಿಶೋಧ ಸ್ಪರ್ಧೆ, ಕಂಬಳ ಓಟ, ಪಿರಮಿಡ್ ರಚನೆ, ಬಾಟಲಿಗೆ ನೀರು ತುಂಬಿಸುವುದು, ಜಾರುಕಂಬ ಹಾಗೂ ಲಿಂಬೆ ಚಮಚ ಓಟದ ಸ್ಪರ್ಧೆಗಳನ್ನು ನಡೆಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಬಾಲಚಂದ್ರ ನೆಡಿಲು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಿಶ್ಚಿತ್ ಕಂಟ್ರಮಜಲು, ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ ಉಪಸ್ಥಿತರಿದ್ದು, ಬಹುಮಾನ ವಿತರಿಸಿದರು. ಯುವಕ ಮಂಡಲದ ಅಧ್ಯಕ್ಷ ಬಾಲಚಂದ್ರ ನೆಡಿಲು ಸ್ವಾಗತಿಸಿ, ಪ್ರ‌. ಕಾರ್ಯದರ್ಶಿ ಹರ್ಷಿತ್ ಉಗ್ಗಮೂಲೆ ವಂದಿಸಿದರು. ಶಿಕ್ಷಕ ಜಯಪ್ರಸಾದ್ ಕಾರಿಂಜ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here