ಕೊಡಗು ಸಂಪಾಜೆ: ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ

0

 

ಗ್ರಾಮಸ್ಥರಿಂದ ಗ್ರಾಮ ಪಂಚಾಯತಿಗೆ ಮುತ್ತಿಗೆ

ಸರಿಪಡಿಸದಿದ್ದರೆ ಗ್ರಾ.ಪಂ.ಗೆ ಬೀಗ ಜಡಿಯುವ ಎಚ್ಚರಿಕೆ ನೀಡಿದ ಗ್ರಾಮಸ್ಥರು

ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ಕಳೆದ ಹದಿನೈದು ದಿನಗಳಿಂದ ವ್ಯತ್ಯಯವಾಗುತ್ತಿದ್ದು, ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿದ ಹಾಗೂ ಶೀಘ್ರದಲ್ಲೇ ವ್ಯವಸ್ಥೆ ಸರಿಪಡಿಸದಿದ್ದರೆ ಗ್ರಾ.ಪಂ. ಕಛೇರಿಗೆ ಬೀಗ ಜಡಿಯಿವ ಎಚ್ಚರಿಕೆ ನೀಡಿದ ಘಟನೆ ಆ.12ರಂದು ವರದಿಯಾಗಿದೆ.

 

ಕೊಡಗು ಸಂಪಾಜೆ ಗ್ರಾಮದ ಕೊಯನಾಡು ,ಚೆಡಾವು ,ಚಿಟ್ಟೆಕಾನ ಅರೆಕಲ್ಲು ಮಂಗಲಪಾರೆ ಭಾಗದಲ್ಲಿ ಸುಮಾರು 15 ದಿನಗಳಿಂದ ನಳ್ಳಿ ನೀರು ಸರಬರಾಜು ಆಗದೆ ಕುಡಿಯುವ ನೀರಿನ ಅಭಾವದಿಂದ ಈ ಭಾಗದ ನಿವಾಸಿಗಳು ಕಂಗಾಲಾಗಿದ್ದು, ಈ ಬಗ್ಗೆ ಆ11ರಂದು ಸರಿಪಡಿಸುವಂತೆ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರೂ ಸಾಧ್ಯವಾಗದ ಕಾರಣ ಗ್ರಾಮಸ್ಥರು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮಸ್ಥರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಆಕ್ರೋಶ ವ್ಯಕ್ತಪಡಿಸಿದರೆನ್ನಲಾಗಿದೆ.
ಕೂಡಲೇ ಈ ಭಾಗದಲ್ಲಿ ನೀರಿನ ಅವ್ಯವಸ್ಥತೆಯನ್ನು ಸರಿಪಡಿಸಬೇಕೆಂದು ಘೋಷಣೆ ಹಾಕಿದರಲ್ಲದೇ ನೀರು ಸರಬರಾಜು ನಡೆಸುವ ಸಿಬ್ಬಂದಿಯ ಕಾರ್ಯ ವೈಖರಿಯನ್ನು ಖಂಡಿಸಿದರೆಂದು ತಿಳಿದುಬಂದಿದೆ.


ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ,ಆರಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದು, ಶೀಘ್ರದಲ್ಲೇ ಎಲ್ಲಾ ಭಾಗಕ್ಕೂ ಕುಡಿಯುವ ನೀರಿನ ಸೌಲಭ್ಯವನ್ನು ಮಾಡುತ್ತೇವೆಂದು ಮನವಲಿಸಿ ಭರವಸೆ ನೀಡಿದರು.
ಗ್ರಾಮಸ್ಥರು ಮಾತನಾಡಿ ಸಮಸ್ಯೆ ಪದೇ ಪದೇ ಪುನರಾವರ್ತನೆಯಾದರೆ ಪಂಚಾಯತ್ ಕಚೇರಿಗೆ ಬೀಗ ಜಡಿಯಲಾಗುದು ಎಂದು ಎಚ್ಚರಿಕೆ ನೀಡಿದರೆಂದು ತಿಳಿದುಬಂದಿದೆ.


ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸುರೇಶ ಪಿ. ಎಲ್. ,ಹನೀಫ್ ಎಸ್. ಪಿ. ಶಶಿಕುಮಾರ್ ಹೆಚ್. ಬಿ. ,ವಾಸು ಪೂಜಾರಿ ,ಸುಂದರ ,ಸರೋಜಾ ,ಪ್ರೀತಿಕಾ ,ಸುಲೋಚನಾ ,ಜುಹಾರ ,ಕಾವೇರಿ ,ಗಫೂರ್ ,ತಿಲಕ ,ನಾಗೇಶ್ ,ಹುಕ್ರಪ್ಪ ,,ಸಚಿನ್ ,ಕೇಶವ ,ತೀರ್ಥರಾಮ ,ದಾಮು ಕಲಾಯಿ ,ಮನು ಶೆಟ್ಟಿ ,ಪುನೀತ್ ,ವಸಂತ್ ,ಅಶ್ವತ್ ,ಮಂಜು ,ಅಕ್ಷಯ್ ,ವಿಥಿನ್ ,ಶಿವು ,ದಿವಾಕರ ,ಕಮಲಾ ,ಹಸೈನಾರ್ ,ರಮಣಿ ,ಮತ್ತಿತರರ ಗ್ರಾಮಸ್ಥರು ಉಪಸ್ಥಿತರಿದ್ದರು.