ಪುತ್ತೂರಿನಲ್ಲಿ ಫಾಸ್ಟ್ ಟ್ರ್ಯಾಕ್ ಇಂಡಿಯಾ ಟಯರ್ ಶೋರೂಂ ಉದ್ಘಾಟನೆ

0

ಕೇರಳ ಮತ್ತು ಕರ್ನಾಟಕದಲ್ಲಿ ಪ್ರಖ್ಯಾತ ಕಂಪನಿಗಳ ಟಯರ್ ಮಾರಾಟ ಮಳಿಗೆ ಹೊಂದಿರುವ ಫಾಸ್ಟ್ ಟ್ರ್ಯಾಕ್ ಇಂಡಿಯಾದ ನೂತನ ಮಳಿಗೆ ಪುತ್ತೂರಿನ ಬೈಪಾಸ್ ರಸ್ತೆಯ ಉರ್ಲಾಂಡಿ ಎಸ್‌ಜಿಕೆ ಕಾಂಪ್ಲೆಕ್ಸ್‌ನಲ್ಲಿ ಆ. ೧೧ ರಂದು ಉದ್ಘಾಟನೆಗೊಂಡಿತು. ಮಳಿಗೆಯನ್ನು ಕಾಸರಗೋಡು ಪಿಬಿ ಗ್ರೂಪ್ಸ್ ಆಡಳಿತ ನಿರ್ದೇಶಕ ಪಿಬಿ ಅಹಮದ್ ಉದ್ಘಾಟಿಸಿದರು.

 

ಮ್ಯಾಗ್ ವೀಲ್ ಎಲೈನಮೆಂಟ್ ಮಿಷನ್‌ಗೆ ಯುವ ಉದ್ಯಮಿ ಹರೀಶ್ ಕಾಮತ್ ಚಾಲನೆ ನೀಡಿದರು. ವಾಯು ತಪಾಸಣೆ ಘಟಕವನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಪಿ.ಬಿ ಶಫೀಕ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಟ್ಟಡ ಮಾಲಕರಾದ ಕೃಷ್ಣ ಕಾಮತ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉದ್ಯಮಿ ಹಾರೀಸ್ ಅಬೂಬಕ್ಕರ್ ಹಾಗೂ ಕಟ್ಟಡ ಮಾಲಕ ಕೃಷ್ಣ ಕಾಮತ್‌ರವರನ್ನು ಸಂಸ್ಥೆಯ ಪಾಲುದಾರರು ಸನ್ಮಾನಿಸಿ ಗೌರವಿಸಿದರು.


ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ, ಕಾಸರಗೋಡು ಉದ್ಯಮಿಗಳಾದ ಅಚ್ಚು ನಾಯ್ಮರಮೂಲೆ, ಚಾಲ ಇಬ್ರಾಹಿಂ, ಅಬ್ದುಲ್ಲಾ ಚೂರಿ, ಮುಜೀಬ್ ಪಿ.ಬಿ, ಪುತ್ತೂರು ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮಂಗಳೂರು ಉದ್ಯಮಿ ಸನ್ಮತ್ ಮೇಲಾಂಟ, ಉದ್ಯಮಿ ಪ್ರವೀಣ್ ಆಳ್ವ, ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಉದ್ಯಮಿ ಸಂತೋಪ್ ಕಾಮತ್ ಮಂಗಳೂರು, ಪುತ್ತೂರು ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ರಿಟ್ಟಸ್ ಸಿಟಿಯಮ್, ಅಶ್ರಫ್
ಬುಳೇರಿಕಟ್ಟೆ, ಸಾಮಾಜಿಕ ಧುರೀಣ ರಫೀಕ್ ದರ್ಬೆ, ಅನ್ಸಾರುದ್ದೀನ್ ಜಮಾಯತ್ ಕಮಿಟಿ ಅಧ್ಯಕ್ಷ ಎಲ್‌ಟಿ ರಜಾಕ್ ಹಾಜಿ, ಒಶಿಯನ್ ಕನ್ಸ್‌ಸ್ಟ್ರಕ್ಷನ್ ಅಡಳಿತ ನಿರ್ದೇಶಕ ಇನಾಯತ್ ಆಲಿ ಮುಲ್ಕಿ, ಉದ್ಯಮಿ ದೀಪೆಶ್ ಶೆಟ್ಟಿ, ಕೆಪೆಕ್ ಮಾಜಿ ನಿರ್ದೇಶಕ ಪಿಎ ಮಹಮ್ಮದ್, ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್, ಹೇಮಂತ್ ಕಾಮತ್, ಪುತ್ತೂರು ಸುದ್ದಿ ಸಮೂಹ ಸಂಸ್ಥೆ ಸಿಇಓ ಸೃಜನ್ ಊರುಬೈಲ್ ಮೊದಲಾದವರು ಉಪಸ್ಥಿತರಿದ್ದರು.
ಉದ್ಯಮಿ ಅನ್ವರ್ ಪೆರಾಜೆ, ಸರ್ಪುದ್ದೀನ್ ಫಾಸ್ಟ್ ಟ್ರ್ಯಾಕ್, ಶೈಮು ಫಾಸ್ಟ್ ಟ್ರ್ಯಾಕ್ ಮೊದಲಾದವರು ಸಹಕರಿಸಿದರು. ಪ್ರಥಮ ಗ್ರಾಹಕರಾಗಿ ಸುಳ್ಯದ ಹಿರಿಯ ಕೃಷಿಕ ಉದ್ಯಮಿ ಇಬ್ರಾಹಿಂ ಸಂಕೇಶ್ ಟಯರ್ ಖರೀದಿಸಿದರು. ಪತ್ರಕರ್ತ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಮಳಿಗೆಯಲ್ಲಿ ಯಕೋಹಮ, ಅಪೋಲೋ, ಮಿಚ್ಲಿ, ಬ್ರಿಡ್ಜ್ ಸ್ಟೋನ್, ಕೊಂಟಿನೆಂಟಲ್, ಪಿರೇಲಿ, ಆಫ್ರೋಡ್ ಟಯರ್‌ಗಳಾದ ಮಾಕ್ಸೀಸ್, ಬೀಯೇಫ್ ಗುಡ್ರಿಚ್ಚ್, ಹ್ಯಾನ್ ಕುಕ್ಕ್, ಸೇರಿದಂತೆ ಎಲ್ಲಾ ಕಂಪನಿಯ ಟಯರ್ಸ್‌ಗಳು, ಮ್ಯಾಗ್ ವೀಲ್, ವಾಹನಗಳಿಗೆ ಬೇಕಾಗುವ ಅತ್ಯಾಧುನಿಕ ಶೈಲಿಯ ಅಲಂಕಾರಿಕ ಸಾಮಾಗ್ರಿಗಳು, ವೀಲ್ ಎಲೈನ್‌ಮೆಂಟ್, ಬ್ಯಾಲೆನ್ಸಿಂಗ್, ಕಾರ್‌ವಾಶ್, ನೈಟ್ರೋಜನ್, ಎಕ್ಸೆಸರೀಸ್, ಫೋಮ್ ವಾಶ್ ಇತ್ಯಾದಿ ಸೌಲಭ್ಯಗಳು ಮಳಿಗೆಯಲ್ಲಿ ದೊರೆಯುತ್ತದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿ ಸಹಕಾರ ಕೋರಿದರು.