ನಾಳೆ ಬೆಳಿಗ್ಗೆ ಸುಳ್ಯ ನಗರದಲ್ಲಿ ರಾಷ್ಟ್ರಧ್ವಜ ಸಹಿತ ಮಾನವ ಸರಪಳಿ

0

 

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಗರ ಪಂಚಾಯತ್ ವತಿಯಿಂದ ಎಲ್ಲಾ ಸಂಘ ಸಂಸ್ಥೆಗಳ ಹಾಗೂ ಶಾಲಾ ಕಾಲೇಜುಗಳ ಸಹಕಾರದೊಂದಿಗೆ ಆಗಸ್ಟ್ 13 ರಂದು ಪೂರ್ವಾಹ್ನ 9 ರಿಂದ 9:15 ರ ತನಕ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ರಾಷ್ಟ್ರಧ್ವಜ ಸಹಿತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ಎಲ್ಲಾ ವರ್ತಕರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಈ 15 ನಿಮಿಷಗಳ ಕಾಲ ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ರಾಷ್ಟ್ರಧ್ವಜದೊಂದಿಗೆ ನಗರದ ರಸ್ತೆಯಲ್ಲಿ ನಿಲ್ಲುವ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮವನ್ನು ಸ್ಮರಣೀಯವಾಗಿಸಬೇಕೆಂದು ನಗರ ಪಂಚಾಯತ್ ವತಿಯಿಂದ ವಿನಂತಿಸಿಕೊಳ್ಳಲಾಗಿದೆ.
ವರ್ತಕರು, ಸಂಘ ಸಂಸ್ಥೆಗಳ ಪ್ರಮುಖರು, ರಿಕ್ಷಾ ಟ್ಯಾಕ್ಸಿ ಮತ್ತಿತರ ವಾಹನ ಚಾಲಕರು, ಸರಕಾರಿ ಕಚೇರಿಗಳ ಸಿಬ್ಬಂದಿಗಳು, ಖಾಸಗಿ ವಾಹನಗಳವರು ಮತ್ತು ಎಲ್ಲಾ ಸಾರ್ವಜನಿಕರು ಸ್ವಯಂ ಸ್ಫೂರ್ತಿಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ನಗರ ಪಂಚಾಯತ್ ವಿನಂತಿಸಿಕೊಂಡಿದೆ.

LEAVE A REPLY

Please enter your comment!
Please enter your name here