ಯೇನೆಕಲ್ಲು: ಸರ್ಕಾರಿ ಪ್ರೌಢಶಾಲೆಯಲ್ಲಿ ದಾನಿಗಳಿಗೆ ಅಭಿನಂದನೆ

0

 

p>

 

ಯೇನೆಕಲ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ದಾನಿಗಳಿಗೆ ಅಭಿನಂದನಾ ಸಮಾರಂಭ ಆ. 12ರಂದು ನಡೆಯಿತು.

ಶಾಲೆಗೆ ನೂತನ ಧ್ವಜಸ್ತಂಭದ ಕೊಡುಗೆ ನೀಡಿದ ಶ್ರೀಮತಿ ಭಾರ್ಗವಿ ನಾಯರ್ ಮತ್ತು ಮಕ್ಕಳು ಅನುಗ್ರಹ ಏನೆಕಲ್ಲು ಇವರ ಮಕ್ಕಳಿಗೆ, ನೂತನ ಸಮವಸ್ತ್ರ ಕೊಡುಗೆ ನೀಡಿದ
ಸ್ಪಾರ್ ಟೆಕ್ನಾಲಜಿ ಸರ್ವಿಸ್ ಇಂಡಿಯಾ ಬೆಂಗಳೂರು ಇದರ
ನಿರ್ದೇಶಕರಾದ ಆನಂದ ಮಲ್ಲಾರ, ಟಿ-ಶರ್ಟ್ ಕೊಡುಗೆ ನೀಡಿದ ಡಿಸೈನ್ ಎಥಿಕ್ಸ್ ಕುಶಾಲಜಿಯ ಶ್ರೀಮತಿ ರಾಮಾ ಕೇಶವ ಸೇರಿದಂತೆ ವಿವಿಧ ಶಾಲೆಗೆ ವಿವಿಧ ಕೊಡುಗೆಗಳನ್ನು ನೀಡಿದವರನ್ನು ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಲಕ್ಷ್ಮೀನಾರಾಯಣ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಅನ್ನಪೂರ್ಣ ಸ್ವಾಗತಿಸಿ ಶ್ರೀಮತಿ ಹರ್ಷಲತ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ದೀಪ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಗೋಪಾಲ ಎಣ್ಣೆಮಜಲು, ಶಾಲಾ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಕಾಂತ ಮತ್ತು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ತುಕಾರಾಮ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here