ಸುಳ್ಯದಲ್ಲಿ ರೋಟರಿ ವತಿಯಿಂದ ಆಟಿ ಆಚರಣೆ

0

ಒಂದು ಕಾಲದಲ್ಲಿ ಬದುಕಿನ ಬವಣೆಗಳಿಂದ ಹೊರಬರಲು ಆಟಿ ತಿಂಗಳಲ್ಲಿ ಅನುಸರಿಸುತ್ತಿದ್ದ ಜೀವನಕ್ರಮ ಗಳು ಇಂದು ಆಚರಣೆಯ ಭಾಗವಾಗಿ ನಮ್ಮ ಮುಂದಿದೆ. ಆಟಿ ತಿಂಗಳಲ್ಲಿ ನಡೆಸುವ ಆಚರಣೆಗಳು, ಆಹಾರ ಪದ್ಧತಿಗಳು ಹಾಗೂ ವಿಧಿ ನಿಷೇಧಗಳು ವೈಜ್ಞಾನಿಕ ತಳಹದಿಯಲ್ಲಿ ನಿಂತಿದೆ. ಇವುಗಳನ್ನು ಆಚರಿಸುವ ಮೂಲಕ ನಮ್ಮ ಹಿರಿಯರು ಹಾಕಿ ಕೊಟ್ಟ ದಾರಿಯಲ್ಲಿ ನಡೆಯಬೇಕೆಂದು ಪತ್ರಕರ್ತೆ, ಲೇಖಕಿ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಇವರು ರೋಟರಿ ಸಭಾ ಭವನದಲ್ಲಿ ಆ.11ರಂದು ನಡೆದ ಆಟಿ ಆಚರಣೆ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.

 


ಸುಳ್ಯ ರೋಟರಿ ಕ್ಲಬ್, ರೋಟರಿ ಕ್ಲಬ್ ಸುಳ್ಯ ಸಿಟಿ , ಇನ್ನರ್ ವೀಲ್ ಕ್ಲಬ್ ಸುಳ್ಯ ಇದರ ಆಶ್ರಯದಲ್ಲಿ ವಿವಿಧ ಆಟಿ ಖಾದ್ಯಗಳ ಪ್ರದರ್ಶನ ಹಾಗೂ ಸ್ಪರ್ಧೆಗಳನ್ನು ಆಟಿ ಆಚರಣೆ ಪ್ರಯುಕ್ತ ನಡೆಸಲಾಯಿತು ಸಭೆಯ ಅಧ್ಯಕ್ಷತೆಯನ್ನು ರೋಟರಿ ಸುಳ್ಯ ಅಧ್ಯಕ್ಷ ಚಂದ್ರಶೇಖರ ಪೇರಾಲು ಇವರು ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಜೋನಲ್ ಲೆಫ್ಟಿನೆಂಟ್ ರೋ ಪ್ರೀತಂ ಡಿ. ಕೆ ,ರೋಟರಿ ಸಿಟಿ ಅಧ್ಯಕ್ಷ ರೋ. ಮುರಳೀಧರ ರೈ, ರೋಟರಿ ಸುಳ್ಯ ಪೂರ್ವಾಧ್ಯಕ್ಷ ರೋ. ಪ್ರಭಾಕರನ್ ನಾಯರ್, ರೋಟರಿ ಸಿಟಿ ಕಾರ್ಯದರ್ಶಿ ರೋ ಶಿವಪ್ರಸಾದ್, ರೋಟರಿ ಕಾರ್ಯದರ್ಶಿ ರೋ ಮಧುರಾ ಎಂ ಆರ್ , ಇನ್ನರ್ ವ್ಹೀಲ್ ಕಾರ್ಯದರ್ಶಿ ಶ್ರೀಮತಿ ಸವಿತಾ ನಾರ್ಕೊಡು ಇವರು ಉಪಸ್ಥಿತರಿದ್ದರು. ಆಟಿ ಖಾದ್ಯವನ್ನು ತಯಾರಿಸಿದ ಎಲ್ಲರಿಗೂ ಸ್ಮರಣಿಕೆ ಹಾಗೂ ವಿಜೇತರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಇನ್ನರ್ ವ್ಹೀಲ್ ಅಧ್ಯಕ್ಷೆ ಶ್ರೀಮತಿ ನಯನಾ ಹರಿಪ್ರಸಾದ್ ವಂದಿಸಿದರು