ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ವತಿಯಿಂದ ಅಮೃತ ಸ್ವಾತಂತ್ರ್ಯೋತ್ಸವ ಆಚರಣೆ

0

 

ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ರಿಂದ ಚಾಲನೆ

ಕುಮಾರಧಾರಾದಿಂದ ಮೆರವಣಿಗೆ  ಆರಂಭ, 3 ಸಾವಿರ ಮಂದಿ ಭಾಗಿ

ಅಮೃತ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ವತಿಯಿಂದ ಕುಮಾರಧಾರೆಯಿಂದ ದೇವಳದ ವರೆಗೆ ಇಂದು ಬೆಳಗ್ಗೆ ಮೆರವಣಿಗೆಯಲ್ಲಿ ಧ್ವಜ ಯಾತ್ರೆ ನಡೆಯಿತು.

ಪುತ್ತೂರು ಸಹಾಯಕ ಆಯುಕ ಗಿರೀಶ್ ನಂದನ್ ಮೆರವಣಿಗೆಗೆ ಚಾಲನೆ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ। ನಿಂಗಯ್ಯ, ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ, ಪಿ ಡಿ ಒ ಯು ಡಿ ಶೇಖರ್, ಕೆ ಎಸ್ ಎಸ್ ಕಾಲೇಜು ಪ್ರಾಂಶುಪಾಲ ದಿನೇಶ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ದೇವಸ್ಥಾನದ ನೌಕರರು, ಕೆ ಎಸ್ ಎಸ್ ಕಾಲೇಜು, ಎಸ್ ಎಸ್ ಪಿ ಯು ವಿದ್ಯಾರ್ಥಿಗಳು, ಸುಬ್ರಹ್ಮಣ್ಯ ಪ್ರಾಥಮಿಕ ಶಾಲೆ, ಸಿಬ್ಬಂದಿ ವರ್ಗದವರು, ಹೋಂ ಗಾರ್ಡ್, ಸೆಕ್ಯುರಿಟಿಯವರು, ಸುಬ್ರಹ್ಮಣ್ಯದ ಸಂಘ ಸಂಸ್ಥೆಗಳು ಭಾಗವಹಿಸಿದ್ದರು.
ಸುಮಾರು 3000 ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ರಥಬೀದಿಯಲ್ಲಿ ಸಾಂಕೇತಿಕ ಸಭಾ ಕಾರ್ಯಕ್ರಮ ನಡೆದಿದ್ದು ಎಸ್ ಎಸ್ ಪಿ ಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ಕೆ ಎಸ್ ಎಸ್ ಕಾಲೇಜಿನ ಉಪನ್ಯಾಸಕಿ ಆರತಿ ಸ್ವಾತಂತ್ರ್ಯದ ಮಹತ್ವ ತಿಳಿಸಿದರು. ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಶುಭ ಹಾರೈಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯಶವಂತ ರೈ ವಂದಿಸಿದರು. ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರೂಪಿಸಿದರು.

 

ಪೋಟೋ: ಪ್ರತಿರೂಪ ಸ್ಟುಡಿಯೋ ಸುಬ್ರಹ್ಮಣ್ಯ