ಆ.15: ಕನಕಮಜಲು ಗ್ರಾ.ಪಂ. ವತಿಯಿಂದ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಆಚರಣೆ

0

 

ದೇಶಸೇವೆ ಮಾಡಿದ ಗ್ರಾ.ಪಂ. ವ್ಯಾಪ್ತಿಯ ಸೈನಿಕರಿಗೆ ಗೌರವಾರ್ಪಣೆ

ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಆಚರಣೆ ಹಾಗೂ ದೇಶಸೇವೆ ಮಾಡಿದ ಗ್ರಾ.ಪಂ. ವ್ಯಾಪ್ತಿಯ ಸೈನಿಕರಿಗೆ ಗೌರವಾರ್ಪಣೆ ಕಾರ್ಯಕ್ರಮವು ಕನಕಮಜಲು ಗ್ರಾ.ಪಂ. ಸಭಾಭವನದಲ್ಲಿ ಆ.15ರಂದು ಜರುಗಲಿದೆ.

ಬೆಳಿಗ್ಗೆ ನಡೆಯುವ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ ಅವರು ಧ್ವಜಾರೋಹಣ ಮಾಡಲಿದ್ದಾರೆ.
ಬಳಿಕ ಗ್ರಾ.ಪಂ. ಸಭಾಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ದೇಶಸೇವೆ ಮಾಡಿದ ಗ್ರಾಮದ ಒಟ್ಟು ಹದಿನಾರು ಮಂದಿ ಸೈನಿಕರುಗಳನ್ನು ಸನ್ಮಾನಿಸಿ, ಗೌರವಿಸಲಾಗುವುದು ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ ಅವರು ತಿಳಿಸಿದ್ದಾರೆ.