ಬೆಳ್ಳಾರೆ ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ

0

 

ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಪ್ರಾಯೋಜಿತ ಜ್ಞಾನದೀಪ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆಯ ಇಂಟರ್ಯಾಕ್ಟ್ ಕ್ಲಬ್ ನ 2022-23 ನೇ ಸಾಲಿನ ನೂತನ ಪದಾಧಿಕಾರಗಳ ಪದಗ್ರಹಣ ಸಮಾರಂಭ ದೇವಿ ಹೈಟ್ಸ್ ನ ಸಭಾಭವನದಲ್ಲಿ ನಡೆಯಿತು.

ಬೆಳ್ಳಾರೆ ಟೌನ್ ರೋಟರಿ ಕ್ಲಬ್ ನ ಅಧ್ಯಕ್ಷ ಕೇಶವಮೂರ್ತಿ ಪದಗ್ರಹಣ ನೆರವೇರಿಸಿದರು. ರೋಟರಿ ಜಿಲ್ಲೆ 3181 ವಲಯ 5ರ ಅಸಿಸ್ಟೆಂಟ್ ಗವರ್ನರ್ ಶಿವರಾಮ ಏನೆಕಲ್ಲು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ನ ನಿರ್ಗಮಿತ ಅಧ್ಯಕ್ಷೆ ಮೇಘನಾ ಕಣಿಲೆಗುಂಡಿ ಹಾಗೂ ನಿರ್ಗಮಿತ ಕಾರ್ಯದರ್ಶಿ ಇಂ .ವಿಘ್ನೇಶ್ ನೂತನ ಅಧ್ಯಕ್ಷ ಚಂದನ್ ಕೆ.ಎಸ್ ಹಾಗೂ ಕಾರ್ಯ ದರ್ಶಿ ಕಾವ್ಯ ಅವರಿಗೆ ಅಧಿಕಾರ ಹಸ್ತಾಂತರಿಸಿದರು.ನೂತನ ಸದಸ್ಯರಾಗಿ ಸೇರ್ಪಡೆಯಾದ ಒಟ್ಟು 23ಮಂದಿ ವಿದ್ಯಾರ್ಥಿಗಳನ್ನು ಪದಗ್ರಹಣ ಅಧಿಕಾರಿ ಹೂ ನೀಡಿ ಸ್ವಾಗತಿಸಿದರು. ನಿರ್ಗಮಿತ ಇಂಟರ್ಯಾಕ್ಟ್ ಅಧ್ಯಕ್ಷೆ ಮೇಘನಾ ಕಣಿಲೆಗುಂಡಿ ಅಧ್ಯಕ್ಷತೆ ವಹಿಸಿದ್ದರು . ಜ್ಞಾನದೀಪ ಶಿಕ್ಷಣ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ,ರೋಟರಿ ಕ್ಲಬ್ ಬೆಳ್ಳಾರೆ ಟೌನ್ ನ ಇಂಟರ್ಯಾಕ್ಟ್ ಚೇರ್ ಮೆನ್ ಪ್ರಮೋದ್ ಕುಮಾರ್ ರೈ , ಇಂಟರ್ಯಾಕ್ಟ್ ಶಿಕ್ಷಕ ಸಂಯೋಜಕ ಗಣೇಶ್ ನಾಯಕ್ ಉಪಸ್ಥಿತರಿದ್ದರು. ನಿರ್ಗಮಿತ ಕಾರ್ಯದರ್ಶಿ ವಿಘ್ನೇಶ್ ವರದಿ ವಾಚಿಸಿದರು. ಉಪನ್ಯಾಸಕ ಚಂದ್ರಶೇಖರ್ ಆಲೆಟ್ಟಿ ಸ್ವಾಗತಿಸಿ , ಕಾವ್ಯ ವಂದಿಸಿದರು. ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿ ರಾಹಿಲಾ ಕಾರ್ಯಕ್ರಮ ನಿರ್ವಹಿಸಿದರು.