ಅಜ್ಜಾವರ : ಗ್ರಂಥಪಾಲಕರ ದಿನಾಚರಣೆ

0

 

ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾ.ಪಂ. ಅಜ್ಜಾವರ
ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಅಜ್ಜಾವರ ಇದರ ವತಿಯಿಂದ ಪದ್ಮ ಶ್ರೀ ಡಾ.ಎಸ್.ಆರ್ ರಂಗನಾಥನ್ ರವರ ಜನ್ಮ ದಿನದ ಪ್ರಯುಕ್ತ “ಗ್ರಂಥ ಪಾಲಕರ ದಿನಾಚರಣೆ”ಯನ್ನು ಆಚರಿಸಲಾಯಿತು.

ಡಾ.ಎಸ್.ಆರ್ .ರಂಗನಾಥನ್ ರವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷರಾದ ಸತ್ಯವತಿ ಬಸವನಪಾದೆಯವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಲೀಲಾ ಮನಮೋಹನ, ಪಂಚಾಯತ್ ಸದಸ್ಯರಾದ ದಿವ್ಯ ಜಯರಾಮ, ಅಬ್ದುಲ್ಲ ಅಜ್ಜಾವರ, ಮುಖ್ಯ ಅತಿಥಿಯಾಗಿ ಸ.ಪ್ರೌ.ಶಾಲೆ ಅಜ್ಜಾವರದ ಮುಖ್ಯ ಶಿಕ್ಷಕರಾದ ಗೋಪಿನಾಥ್ ವಿವಿಧ ಸ್ಪರ್ಧೆಯ ತೀರ್ಪುಗಾರಾದ ನಿವೃತ್ತ ಶಿಕ್ಷಕರಾದ ಬಾಲಕೃಷ್ಣ ನಾಯ್ಕ ಅಜ್ಜಾವರ, ನಿವೃತ್ತ ಕೆನರಾ ಬ್ಯಾಂಕ್ ಮೆನೇಜರ್ ರಾಮಚಂದ್ರ ಪಲ್ಲತ್ತಡ್ಕ, ಅನಿಲ್ ರಾಜ್ ಕರ್ಲಪ್ಪಾಡಿ,ಮತ್ತು ಸ್ಪರ್ಧಾಳುಗಳಾದ ಗ್ರಾಮ ಪಂಚಾಯತ್ ವ್ಯಾಪ್ತಿ ಮಕ್ಕಳು , ಶಿಕ್ಷಕರು, ಪೋಷಕರು, ಸಂಜೀವನಿ ಸಂಘದ ಪ್ರೇರಕರಾದ ಜಯಶ್ರೀ ಬೇಲ್ಯ, ಗ್ರಂಥಾಲಯ ಸಮಿತಿ ಸದಸ್ಯರಾದ ಶಶ್ಮಿ ಭಟ್ ,ಅಬ್ದುಲ್ ರಹಿಮಾನ್ ಶಿರಾಜೆ, ಬೆಳ್ಯಪ್ಪ ಮುಡೂರು, ಮಿಥುನ್ ಕರ್ಲಪ್ಪಾಡಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಮಾಲ ಎ.ಕೆ. ಹಾಗೂ ಸಿಬ್ಬಂದಿ ವರ್ಗ ಗ್ರಂಥಾಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಮರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಶ್ಮಿ ಭಟ್ ಅಜ್ಜಾವರ ಇವರು ಗ್ರಂಥಾಲಯಕ್ಕೆ ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದರು.