ಕಲ್ಮಡ್ಕ ಗ್ರಾ.ಪಂ.ನಲ್ಲಿ ಧ್ವಜಾರೋಹಣ

0

 

 

ಕಲ್ಮಡ್ಕ ಗ್ರಾಮ ಪಂಚಾಯತಿನಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆ. 13 ರಂದು ಧ್ವಜಾರೋಹಣವನ್ನು ಅಧ್ಯಕ್ಷರಾದ ಶ್ರೀಮತಿ ಹಾಜಿರಾ ಗಫೂರ್ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸದಸ್ಯರುಗಳಾದ ಲೋಕೇಶ್ ಆಕ್ರಿಕಟ್ಟೆ, ಪವಿತ್ರ ಕುದ್ವ, ಮೀನಾಕ್ಷಿ ಕೆ, ಹರೀಶ್ ಮಾಳಪ್ಪಮಕ್ಕಿ, ಪಂಚಾಯತ್ ಕಾರ್ಯದರ್ಶಿಯಾದ ಗೋಪಾಲಕೃಷ್ಣ ಕೆ, ಹಾಲು ಉತ್ಪಾದಕರ ಸಂಘ ಪಡ್ಪಿನಂಗಡಿ ಇದರ ಅಧ್ಯಕ್ಷರಾದ ಕಾರ್ಯಪ್ಪ ಗೌಡ ಆಕ್ರಿಕಟ್ಟೆ, ಕಾರ್ಯದರ್ಶಿ ತೀರ್ಥಾವತಿ, ಸ.ಹಿ.ಪ್ರಾ. ಶಾಲೆ ಪಡ್ಪಿನಂಗಡಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮೇದಪ್ಪ ಗೌಡ ಅಲೆಂಗಾರ, ಸಂಜೀವಿನಿ ಸಂಘದ ಪದಾಧಿಕಾರಿಗಳಾದ ಅನಿತಾ, ಭವಾನಿ, ಮೋಹನಾಂಗಿ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಶೇಷಪ್ಪ, ತೀರ್ಥಪ್ರಸಾದ್, ನವೀನ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.