ಪೆರಾಜೆ ಶಾಸ್ತಾವು ಕ್ಷೇತ್ರದಲ್ಲಿ ಸೋಣ ಶನಿವಾರದ ಪ್ರಯುಕ್ತ ವಿಶೇಷ ಶನಿಪೂಜಾ ಕಾರ್ಯಕ್ರಮ

0

 

ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಆಗಸ್ಟ್ ತಿಂಗಳ ೨೦, ೨೭ ಹಾಗೂ ಸೆಪ್ಟೆಂಬರ್ ತಿಂಗಳ ೩, ೧೦ ಹಾಗೂ ೧೭ನೇ ತಾರೀಕಿನಂದ ನಡೆಯುವ ಸೋಣ ಶನಿವಾರದ ಪ್ರಯುಕ್ತ ವಿಶೇಷ ಶನಿಪೂಜಾ ಕಾರ್ಯಕ್ರಮಗಳು ಜರುಗಲಿದೆ.

ಹಾಗೂ ಆ.೨೯ರಂದು ಶ್ರೀ ದೇವರಿಗೆ ನವಾನ್ನ ಸಮರ್ಪಣೆ ನಡೆಯುವುದು. ಆ.೩೧ರಂದು ಗಣೇಶ ಚತುರ್ಥಿಯ ಪ್ರಯುಕ್ತ ಸಾಮೂಹಿಕ ಗಣಹೋಮ ಹಾಗೂ ಸೀಮೆ ಕ್ಷೇತ್ರ ಶ್ರೀ ಭಗಂಡೇಶ್ವರ ಹಾಗೂ ತಾಯಿ ಕಾವೇರಿ ಮಾತೆಗೆಶ್ರೀ ದೇವಳದಿಂದ ಕದಿರು ಸಮರ್ಪಣೆ ನಡೆಯುವುದು.
ಶನಿಪೂಜೆ ವಾರದ ಎಲ್ಲಾ ದಿನಗಳಲ್ಲಿಯೂ ನಡೆಯಲ್ಪಡುತ್ತದೆ. ಪೂಜೆ ಮಾಡಿಸುವ ಭಕ್ತಾದಿಗಳು ಬೆಳಗ್ಗೆ ೭ ಗಂಟೆಗೆ, ಮಧ್ಯಾಹ್ನ ೧೧ ಗಂಟೆಯ ಮುಂಚಿತವಾಗಿ ದೇವಳದಲ್ಲಿ ಹಾಜರಿರುವುದು. ಸೋಣ ಶನಿವಾರಗಳಲ್ಲಿ ಭಕ್ತರ ಅನುಕೂಲಕ್ಕಾಗಿ ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ ಎಂದು ದೇವಳದ ಆಡಲಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here