ವಾಲ್ತಾಜೆ ರಸ್ತೆ ಊರವರಿಂದ ಜೆಸಿಬಿ ಮತ್ತು ಶ್ರಮದಾನ ಮೂಲಕ ದುರಸ್ಥಿ

0

 

p>

 

ಶೀಘ್ರದಲ್ಲಿ ಕಾಮಗಾರಿ ಪೂರ್ಣ ಕಂಟ್ರಾಕ್ಟರ್ ಭರವಸೆ

ದೇವಚಳ್ಳ ಗ್ರಾಮದ ವಾಲ್ತಾಜೆಯ ಕಡ್ಲಾರ್ ಎಂಬಲ್ಲಿ ಕಾಂಕ್ರೀಟ್ ರಸ್ತೆ ಮಾಡಲು ನೆಲ ಸ್ವಚ್ಛ ಮಾಡಿ ಕಾಮಗಾರಿ ನಡೆಸಲು ಸಿದ್ಧತೆ ನಡೆದಿದ್ದು, ಕಾಮಗಾರಿ ವಿಳಂಬ ಆಗಿತ್ತು. ಈಗ ಮಳೆ ವಿಪರೀತವಾಗಿದ್ದು, ತಕ್ಷಣವೇ ಕಾಮಗಾರಿ ಪೂರ್ಣ ಮಾಡುತೇನೆ. ಮತ್ತು ಜೆಸಿಬಿ ಮುಖಾಂತರ ಮಾಡಿದ ಕೆಲಸದ ವೆಚ್ಚವನ್ನು ಭರಿಸುವುದಾಗಿ ಕಾಂಟ್ರಾಕ್ಟರ್ ಭರವಸೆ ನೀಡಿದ್ದಾರೆ.


ಶ್ರಮದಾನ ಸಂದರ್ಭದಲ್ಲಿ ಕೃಷ್ಣ ಕುಮಾರ್ ಪಿಲಿಂಜ, ಮನೋಜ್ ಗುಡ್ಡೆ, ಪದ್ಮ ಮೀನಾಜೆ, ಕೇಶವ ಕೊರಂಬಡ್ಕ, ವೇಣು ಚಿದ್ಗಲ್, ರವೀಂದ್ರ ಕೋಡೊಂಬು, ತೀರ್ಥರಾಮ ಕೊಂಬೆಟ್ಟು, ಚಂದ್ರಶೇಖರ ಕಡೋಡಿ ಭಾಗವಹಿಸಿ ರಸ್ತೆಯನ್ನು ತಾತ್ಕಾಲಿಕ ದುರಸ್ಥಿಗೊಳಿಸಿದರು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದನ್ನು ಊರವರು ಸ್ಮರಿಸಿದ್ದಾರೆ.

LEAVE A REPLY

Please enter your comment!
Please enter your name here