ಸುಳ್ಯ : ರೋಟರಿ ಪ್ರೌಢಶಾಲೆಯಲ್ಲಿ ಧ್ವಜಾರೋಹಣ

0

 

p>

 

ರೋಟರಿ ಆಂಗ್ಲಮಾದ್ಯಮ ಪ್ರೌ ಢಶಾಲೆ ಸುಳ್ಯ ಇಲ್ಲಿ ಇಂದು ಧ್ವಜಾರೋಹಣವನ್ನು ನೆರವೇರಿಸಲಾಯಿತು. ವಿದ್ಯಾಸಂಸ್ಥೆಗಳ ಸಂಚಾಲಕರಾದ ರೊ.ಗಿರಿಜಾಶಂಕರ್ ತುದಿ ಯಡ್ಕ ಧ್ವಜಾರೋಹಣವನ್ನು ನಡೆಸಿ, ರಾಷ್ಟ್ರಧ್ವಜದ ಗೌರವ ಮಹತ್ವವನ್ನು ವರ್ಣಿಸಿ, ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ವಿದ್ಯಾರ್ಥಿಗಳ, ಹಿರಿಯರ, ಪೋಷಕರ ಜವಾಬ್ದಾರಿಯನ್ನು ತಿಳಿಸಿ ಮಕ್ಕಳು ಮುಂದಿನ ಭವ್ಯ ಭಾರತದ ಸತ್ಪ್ರಜೆಗಳಾಗಿ ಬೆಳಗಬೇಕೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಾಷ್ಟ್ರಗೀತೆ, ವಂದೇ ಮಾತರಂ, ಧ್ವಜ ಗೀತೆ ಬರೆಯುವ ಸ್ಪರ್ಧೆ ಯಲ್ಲಿ ವಿಜೇತರಾದ ಕು. ಪ್ರಣಮ್ಯ ಎನ್ ಆಳ್ವ ಮತ್ತು ಕು. ಮನುಜ್ಞಾ ಇವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮೆಟ್ಟಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ , ಹಾಗೂ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ನಾಯಕಿ ಕು. ಅನುಜ್ಞಾ ಕಾರ್ಯ ಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here