ಎಪ್ಪತ್ತೈದು ಸ್ವಾತಂತ್ರ್ಯ ಸಂಭ್ರಮಗಳನ್ನೂ ಕಂಡಿದ್ದ ಕನ್ನಡ್ಕ ಶೀನಪ್ಪ ಗೌಡರಿಂದ ಅಮೃತ ವರ್ಷದ ಧ್ವಜ ವಂದನೆ

0

 

p>

ಎಪ್ಪತ್ತೈದನೆ ವರ್ಷದ ಸ್ವಾತಂತ್ರ ಸಂಭ್ರಮಾಚರಣೆ “ಹರ್ ಘರ್ ತಿರಂಗಾ” ಉತ್ಸವದಲ್ಲಿ ಪಾಲ್ಗೊಳ್ಳುವ ಸೌಭಾಗ್ಯ ಪಡೆದು ನವತರುಣರಂತೆ ಉತ್ಸಾಹ ದಲ್ಲಿ ಪಾಲ್ಗೊಂಡ ತಾಲೂಕಿನ ಅಪರೂಪದ ಕೆಲವೆ ಮಂದಿ ಅತಿ ಹಿರಿಯರ ಪೈಕಿ ಪೈಚಾರಿನ ಕನ್ನಡ್ಕ ಶೀನಪ್ಪ ಟೈಲರ್ ಕೂಡಾ ಓರ್ವರು.

 

ಮೂಲತಃ ಪುತ್ತೂರು ತಾಲೂಕಿನ ಸುಳ್ಯಪದವು ಮೂಲದವರಾದ 88 ವಯಸ್ಸಿನ ಶೀನಪ್ಪ ಟೈಲರ್ ಸುಳ್ಯ ನಗರ ನಿವಾಸಿ. 60 ರ ದಶಕದಲ್ಲಿ ಸುಳ್ಯ ಪೇಟೆಯಲ್ಲಿ ಪ್ರಖ್ಯಾತ ಟೈಲರ್ ಆಗಿದ್ದವರು. ದಿವಂಗತ ಕುರುಂಜಿ ವೆಂಕಟ್ರಮಣ ಅವರ ಕಾಲದಲ್ಲಿ ಶ್ರೀ ರಾಮ ಪೇಟೆಯಲ್ಲಿದ್ದ ಅವರ ಜವಳಿ ಮಳಿಗೆಯಲ್ಲಿ ದೀರ್ಘ ಅವಧಿಯಲ್ಲಿ ಟೈಲರ್ ವೃತ್ತಿನಡೆಸುತಿದ್ದು ಬಳಿಕ ಸ್ವಂತ ಅಂಗಡಿ ಹೊಂದಿದ್ದು ಹಲವಾರು ಮಂದಿಗೆ ಉದ್ಯೋಗ ಮತ್ತು ವೃತ್ತಿ ತರಬೇತಿ ನೀಡಿದವರು.

ತಮ್ಮ ವೃತ್ತಿ ಜೀವನದಲ್ಲಿ ಎಷ್ಟೊ ಬಾರಿ ತಿರಂಗಾ ಧ್ವಜವನ್ನು ಹೊಲಿದೊ ಅಥವಾ ಇತರೆ ಸಂಸ್ಥೆ -ಕಚೇರಿಗಳಲ್ಲಿ ಜರುಗುತಿದ್ದ ಧ್ವಜಾರೋಹಣ ಸಮಾರಂಭದಲ್ಲೇ ಪಾಲ್ಗೊಂಡು ಸಂಭ್ರಮಿಸುತಿದ್ದ ಶೀನಪ್ಪ ಗೌಡರು ತಮ್ಮ ಇಳಿವಯಸ್ಸಿನಲ್ಲಿ 75 ನೇ ವರ್ಷದ ಸಂಭ್ರಮಾಚರಣೆ ಹೊಸ್ತಿಲಲ್ಲಿ ತಮ್ಮ ಮನೆಯಲ್ಲಿ ಅತ್ಯುತ್ಸಾಹದಿಂದ ಮನೆಯವರೊಡಗೂಡಿ ಧ್ವಜವಂದನೆ ನೆರವೇರಿಸಿ ಸಂಭ್ರಮಿಸಿಕೊಂಡರು.

LEAVE A REPLY

Please enter your comment!
Please enter your name here