ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ

0

 

ಅಜ್ಜಾವರ, ಮಂಡೆಕೋಲು ಗ್ರಾಮದಲ್ಲಿ ಅದ್ದೂರಿ ಆಚರಣೆ ಸಿದ್ಧತೆ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಎಲ್ಲಾ ಕಡೆಯೂ ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಅಜ್ಜಾವರ ಮತ್ತು ಮಂಡೆಕೋಲು ಗ್ರಾಮಗಳಲ್ಲಿಯೂ ಅದ್ದೂರಿಯಾಗಿ ನಡೆಯಲಿದೆ.

ಮಂಡೆಕೋಲು ಗ್ರಾಮದಲ್ಲಿ ಗ್ರಾಮದ ಎಲ್ಲಾ 1400 ಮನೆಗಳಿಗೂ ರಾಷ್ಟ್ರಧ್ವಜವನ್ನು ವಿತರಿಸಲಾಗಿದೆ. ಆಗಸ್ಟ್ 15ರಂದು ಬೆಳಗ್ಗೆ ಪಂಚಾಯತಿನಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನಡೆದ ಬಳಿಕ ರಾಷ್ಟ್ರಧ್ವಜ ಹಿಡಿದು ತಿರಂಗಾ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪಂಚಾಯಿತಿ ಬಳಿಯಿಂದ ಆರಂಭಗೊಳ್ಳುವ ತಿರಂಗ ಯಾತ್ರೆ ಮಂಡೆಕೋಲು ಮೇಲಿನ ಪೇಟೆಯವರೆಗೆ ಸಾಗಿ ಬಳಿಕ ಮಂಡೆಕೋಲು ಶಾಲಾವಠಾರಕ್ಕೆ ಬರಲಿದೆ. ಅಲ್ಲಿ ಸಭಾ ಕಾರ್ಯಕ್ರಮ ನಡೆಯುವುದು. ಪೇರಾಲು ಶಾಲೆಯಲ್ಲಿಯೂ ಕಾರ್ಯಕ್ರಮ ವಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲು ತಿಳಿಸಿದ್ದಾರೆ.

ಅಜ್ಜಾವರ ಗ್ರಾಮ ಪಂಚಾಯಿತಿನಲ್ಲಿ ಬೆಳಗ್ಗೆ 8:00ಗೆ ಧ್ವಜಾರೋಹಣ ನಡೆಯಲಿದೆ. ಗ್ರಾಮದ ಎಲ್ಲಾ ಕಡೆಯಲ್ಲಿಯೂ ಅದ್ದೂರಿಯಾಗಿ ಅಮೃತ ಮಹೋತ್ಸವದ ಆಚರಣೆ ನಡೆಯುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತ್ಯವತಿ ಬಸವನಪಾದೆ ಹೇಳಿದ್ದಾರೆ.

ಮಾವಿನಪಳ್ಳ ದಲ್ಲಿ ಧ್ವಜಾರೋಹಣ ನಡೆದ ಬಳಿಕ ನೂರಾರು ಮಂದಿ ಗ್ರಾಮಸ್ಥರು ಸೇರಿಕೊಂಡು ಸ್ವಾತಂತ್ರ್ಯದ ಅಮೃತ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಬಳಿಕ ಅಜ್ಜಾವರ ಶಾಲೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಮಾಡಲಾಗುವುದು ಎಂದು ಪ್ರತಾಪ ಯುವಕ ಮಂಡಲದ ಅಧ್ಯಕ್ಷ ಗುರುರಾಜ್ ಅಜ್ಜಾವರ ತಿಳಿಸಿದ್ದಾರೆ.5