ಕವನ : ತಾಯ್ನೆಲದ ಋಣ

0

 

ಭಾರತಮಾತೆಯ ಪುತ್ರರು ನಾವೆಲ್ಲರೂ ಒಂದೇ
ಭೇದವನೆಣಿಸದೆ ಬದುಕುವ ಈ ತಾಯಿಯ ಮುಂದೆ//
ದ್ವೇಷ ಅಸೂಯೆ ಕೋಮುಭಾವನೆ ಬದಿಗಿಟ್ಟು
ದೇಶದ ಏಕತೆ ಏಳಿಗೆಗೆ ಪಣವನು ತೊಟ್ಟು//
ಒಂದಾಗುತ ನಾವು ಮುಂದೆ ಸಾಗುವ
ಭಾರತಾಂಬೆಯ ನಿತ್ಯ ಸೇವೆ ಮಾಡುವ//

ಕಳಚಿದೆ ದಾಸ್ಯದ ಸಂಕೋಲೆಯ ಕೊಂಡಿ
ಹೊಸ ಬೆಳಕಲಿ ಸಾಗಲಿ ಬದುಕಿನ ಬಂಡಿ//
ಜಾತಿ-ಮತ-ಧರ್ಮಗಳನು ದೂರವಿರಿಸಿ
ಭಾವೈಕ್ಯತೆಯ ರಸಧಾರೆಯನುಣಿಸಿ//
ವಿವಿಧತೆಯಲಿ ಏಕತೆಯನು ಮೆರೆಸಿ
ಭ್ರಾತೃತ್ವದ ಸವಿ ಬಂಧನವ ತೊಡಿಸಿ//

ಮೇಲು ಕೀಳೆಂಬ ಭೇಧವೇತಕೆ ಇನ್ನೂ
ಮಾನವತ್ವವ ಮರೆತು ರಕ್ಷಸನಾಗಬೇಡ ನೀನು//
ಭಾರತಾಂಬೆಯೆ ತಾಯಿ ನಮಗೆ ಎಂದೆಂದಿಗೂ
ತಾಯ್ನೆಲದ ಋಣ ತೀರಿಸುವ ನಾವೆಂದಿಗೂ//
ತಾಯಿ ಮಡಿಲಲಿ ಕಾಯ ಅಳಿಯುವ ಮುನ್ನ
ಪ್ರೀತಿ ಹಂಚುತ ಬದುಕುವ ನಾವು, ಬಾ ಅಣ್ಣ//

✍️ *ಕೆಂಚವೀರಪ್ಪ*
ಚಿತ್ರಕಲಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಮರ್ಕಂಜ

*ಬಾವುಟ*

ಭೂತಾಯಿಯ ಒಡಲು ಸುಡುತಲಿತ್ತು
ಅಸಹಾಯಕತೆಯ ಬೆಂಕಿಯಲಿ ಬೇಯುತ್ತಿತ್ತು /
ಭಾರತೀಯರ ಕೈ ಕಟ್ಟಿ ಹಾಕಿತ್ತು
ಸ್ವಾತಂತ್ರ್ಯ ಪಡೆಯುವ ಹಠ ಮನದಿ ತುಂಬಿತ್ತು //

ಸ್ವಾತಂತ್ರ್ಯ ಪೂರ್ವದಿ ಬ್ರಿಟಿಷರ ಕಾಟ
ದೇಶಪ್ರೇಮಿಗಳಿಗೆ ಸ್ವಾತಂತ್ರ್ಯ ಪಡೆಯುವ ಹಠ /
ಜನ ಕಳೆದುಕೊಂಡರು ಮನೆ ಮಠ
ಸ್ವಾತಂತ್ರ್ಯದ ಕಿಚ್ಚು ತುಂಬಿಕೊಂಡಿದ್ದು ದಿಟ //

ಹಠ ಬಿಡದ ವೀರರು ನಮ್ಮ ಜನ
ಬ್ರಿಟಿಷರನ್ನು ಓಡಿಸಿದ ಈ ದಿನ /
ಫಲವಾಗಿ ಇಂದು ಹಾರುತಿದೆ ಬಾನಲ್ಲಿ ಬಾವುಟ
ಅಷ್ಟ ದಿಕ್ಕುಗಳಲ್ಲಿ ದರ್ಪದಿ ಹಾರಾಡುತ //

ತ್ರಿವರ್ಣದ ಹೆಮ್ಮೆಯ ನಮ್ಮ ಬಾವುಟ
ಕಲಿಸುತ್ತಿದೆ ನಮಗೆ ಭಾರತೀಯರೆಂಬ ಪಾಠ /
ಕೂಡಿಬಾಳುವ ನಾವೆಂದಿಗೂ ಹೀಗೆ
ದುಡಿಯುವ ಒಟ್ಟಾಗಿ ದೇಶದ ಪ್ರಗತಿಗೆ //

✍️ *ಕೃಪಾಶ್ರೀ ಕೆ ಸಿ*
ಹತ್ತನೇ ತರಗತಿ
ಸರಕಾರಿ ಪ್ರೌಢ ಶಾಲೆ ಮರ್ಕಂಜ

*ಭಾರತಾಂಬೆ*

ಓ ನನ್ನ ತಾಯಿ ಭಾರತಾಂಬೆ
ನೀನೇ ನಮ್ಮ ಭ್ರಮರಾಂಬೆ/
ಕರುಣೆಯ ಕಡಲಮ್ಮ ನೀನು
ಕೈ ಮುಗಿದು ಬೇಡುವೆನು ನಾನು//

ಪುಣ್ಯ ಭೂಮಿ ನನ್ನ ಭಾರತ
ನಾವಿಲ್ಲಿ ಪ್ರೀತಿ ಹಂಚುತ /
ಸುಖ ದುಃಖದಲ್ಲಿ ಭಾಗಿಯಾಗುತ
ಇರುವ ಶಾಂತಿಯಿಂದ ಬದುಕುತ//

ಹಗಲಿರುಳು ಗಡಿಯ ಕಾಯುವ ವೀರರು
ಹರಿಸಿಹರು ನಮಗಾಗಿ ಬಿಸಿ ನೆತ್ತರು/
ಅವರಿಂದಲೇ ನಮ್ಮೆಲ್ಲರ ಉಸಿರು
ಉಳಿಸುವ ನಾವು ತಾಯಿ ಭಾರತೀಯ ಹೆಸರು//

ಮೂರು ಬಣ್ಣಗಳ ಬಾವುಟ
ಎಲ್ಲಾ ಮತ ಧರ್ಮಗಳು ಒಂದೇ ಎನ್ನುತ /
ಎಲ್ಲೆಡೆ ಶಾಂತಿಯ ಮಂತ್ರ ಸಾರುತ
ಹಾರಾಡುತ್ತಿರಲಿ ಅನವರತ //

ಸಂಪತ್ಭರಿತ ಭಾರತ
ಹೊಸ ಹೊಸ ತಂತ್ರಜ್ಞಾನಗಳ ಸೃಷ್ಟಿಸುತ /
ವಿಶ್ವದಿ ಉತ್ತುಂಗಕೇರುತ
ಮೆರೆಯಲಿ ನಮ್ಮ ಭಾರತ//

✍️ *ಸಿಂಚನ.ಇ*
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮರ್ಕಂಜ

*ಭಾರತ ಮಾತೆ*

ಆಕಾಶದಿ ಹಾರಾಡುತ್ತಿದೆ ತ್ರಿವರ್ಣ ಧ್ಜಜವು
ತುಂಬಿದೆ ನನ್ನಲ್ಲಿ ಅಪರಿಮಿತ ಪ್ರೇಮವು/
ತಿರಂಗವು ಆಕರ್ಷಿಸಿದೆ ಎಲ್ಲರ ಗಮನ
ಮಾಡೋಣ ಒಂದಾಗಿ ಗೌರವದಿ ನಮನ
ಭಾರತಾಂಬೆ ಇಂದು ನಿನ್ನ ಜನ್ಮದಿನ//

ರಕ್ತಪಾತಗಳ ಹೊಳೆಯೇ ಹರಿಯಿತು
ಅದೆಷ್ಟೋ ಹೃದಯವು ಮಿಡಿಯಿತು/
ಕಂಬನಿಯ ಆನಂದ ಬಾಷ್ಪ ಸುರಿಯಿತು
ಬಿಳಿಯರ ಧ್ವಜ ಕೆಳಗಿಳಿದ ಆ ದಿನ
ಭಾರತೀಯರಿಗೆ ನಿಜವಾದ ಸುದಿನ//

ನಡೆದವು ನೂರಾರು ಸಮರಗಳು
ಮಡಿದರು ಅಸಂಖ್ಯಾತ ಶೂರರುಗಳು/
ನೆನಪಿದೆ ಇವರ ತ್ಯಾಗ ಬಲಿದಾನಗಳು
ಇವರಿಗೆ ನಮ್ಮ ಪ್ರೀತಿಯ ಪ್ರಣಾಮಗಳು
ಮೊಳಗಲಿ ಕೀರ್ತಿಯು ಹಗಲಿರುಳು//

ಭಾರತ ಮಾತೆಯೇ ನಿನ್ನ ಕೀರ್ತಿಯು ಪ್ರಜ್ವಲಿಸಲಿ
ನನ್ನ ಉಸಿರು ಸದಾ ನಿನಗಾಗಿಯೇ ಮಿಡಿಯಲಿ //
ಓ… ಭಾರತ ಮಾತೆಯೇ… ಓ… ಭಾರತ ಮಾತೆಯೇ….

✍️* *ಗಾಯನ ಬಿ ಡಿ*
೧೦ನೇ ತರಗತಿ
ಸರಕಾರಿ ಪ್ರೌಢಶಾಲೆ ಮರ್ಕಂಜ.

LEAVE A REPLY

Please enter your comment!
Please enter your name here