ಭಾರತೀಯ ತೀಯ ಸಮಾಜದ ಜಾಲ್ಸೂರು ಕನಕಮಜಲು ಗ್ರಾಮ ಸಮಿತಿ ಪುನರ್ ರಚನೆ

0

ಭಾರತೀಯ ತೀಯ ಸಮಾಜ ವಲಯ ಸಮಿತಿ ಸುಳ್ಯ ಇದರ ನೇತೃತ್ವದಲ್ಲಿ ಜಾಲ್ಸೂರು- ಕನಕಮಜಲು ಗ್ರಾಮ ಸಮಿತಿಯ ಪುನರ್ ರಚನೆ ಅಡೂರು ಕ್ಷೇತ್ರದ ಅಡ್ಕಾರ್ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಜಯರಾಮ ಪದವು ಅಧ್ಯಕ್ಷತೆಯಲ್ಲಿ ಆ:7ರಂದು ಅಡ್ಕಾರ್ ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಸ್ಥಾನದ ಮನೆಯಲ್ಲಿ ನಡೆಯಿತು.

p>

ನೂತನ ಸಮಿತಿ ಪದಾಧಿಕಾರಿಗಳಾಗಿ ಅಧ್ಯಕ್ಷ ಭಾಸ್ಕರ ಆಡ್ಕಾರ್, ಉಪಾಧ್ಯಕ್ಷ ಅಚ್ಚುತ ಉಗ್ಗಮೂಲೆ, ಜಯರಾಮ ಪದವು, ಕಾರ್ಯದರ್ಶಿ ಜಗದೀಶ್ ಬೇರ್ಪಡ್ಕ , ಜತೆ ಕಾರ್ಯದರ್ಶಿ ಎ. ಅರ್.ಬಾಬು ಆಡ್ಕಾರ್, ಪ್ರಕಾಶ್ ಬಾಳೆಹಿತ್ಲು ಕೋಶಾಧಿಕಾರಿ ಗೋಪಾಲ (ಕಾನ) ಅಡ್ಕಾರ್, ಸದಸ್ಯರುಗಳಾಗಿ ಎ.ಕೆ.ಕಣ್ಣನ್ ಅಡ್ಕಾರ್ ಬೈಲು , ಶ್ರೀಮತಿ ಅಮ್ಮಣಿ ಟೀಚರ್ ಅಡ್ಕಾರ್ , ನಾಗೇಶ್ .ಸಿ.ಕೆ ಅಡ್ಕಾರ್, ಅರವಿಂದ್ ಅಡ್ಕಾರ್ ,ಅಶೋಕ್ ಅಡ್ಕಾರ್ ಬೈಲು ,ಕೃಷ್ಣ ಅಡ್ಕಾರ್ ಬೈಲು, ನವೀನ್ ಜಾಲ್ಸೂರು, ಗೋಪಾಲ್ ಪದವು, ಶ್ರೀ.ಸತೀಶ ಪದವು, ಶೀಮತಿ ಸುಮತಿ ಪದವು, ಶ್ರೀಮತಿ.ಲೀಲಾವತಿ ವಿನೋಬನಗರ ,ಶ್ರೀಮತಿ ಕವಿತಾ , ಸುನಿಲ್ ಅಡ್ಕಾರ್, ಶ್ರೀಮತಿ ಸಾವಿತ್ರಿ ಕನಕಮಜಲು, ಗಣೇಶ ಅಂಬಾಡಿಮೂಲೆ , ಕೃಷ್ಣಾ ಅಡ್ಕಾರ್ .
ಸುಳ್ಯ ವಲಯ ಸಮಿತಿ ಅಧ್ಯಕ್ಷ ಪವಿತ್ರನ್ ಗುಂಡ್ಯ ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಿ ಶುಭಹಾರೈಸಿದರು.
ವೇದಿಕೆಯಲ್ಲಿ ವಲಯ ಸಮಿತಿ ಕೋಶಾಧಿಕಾರಿ ಸುನಿಲ್ ಕುಮಾರ್ ಪರಿವಾರಕಾನ , ಸುಳ್ಯ ನಗರ ಸಮಿತಿ ಅಧ್ಯಕ್ಷ ಸುರೇಶ್ ಕುತ್ತಮೊಟ್ಟೆ ,ವಲಯ ಸಮಿತಿ ಜತೆ ಕಾರ್ಯದರ್ಶಿ ಪುರುಷೋತ್ತಮ ನಾವೂರು, ಸದಸ್ಯರಾದ ರಾಜೇಶ್ ಅಮೈ , ಎ.ಕೆ. ಕಣ್ಣನ್ ಉಪಸ್ಥಿತರಿದ್ದರು.
ಧೀರಜ್ ಪದವು, ಕರುಣಾಕರ ಸ್ಥಾನದ ಮನೆ, ಚಂದ್ರಾವತಿ ಸ್ಥಾನದ ಮನೆ, ಶೀಮತಿ ದೇವಕಿ ಮತ್ತಿತರರು ಭಾಗವಹಿಸಿದರು.
ಬಾಬು ಎ.ಅರ್. ಅಡ್ಕಾರ್ ಸ್ವಾಗತಿಸಿ, ಹರೀಶ್ ಬೇರ್ಪಡ್ಕ ವಂದಿಸಿದರು.

 

LEAVE A REPLY

Please enter your comment!
Please enter your name here