ಆ.17-21 ಸುಳ್ಯ ಬ್ರಹ್ಮಕುಮಾರೀಸ್ ರಾಜಯೋಗ ಧ್ಯಾನ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ

0

ತೂಗ ಬನ್ನಿರಿ ಬಾಲಗೋಪಾಲನ… ವಿಶೇಷ ಕಾರ್ಯಕ್ರಮ

ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ತಾಲೂಕು ಕೇಂದ್ರ ಸುಳ್ಯ ಬ್ರಹ್ಮಕುಮಾರೀಸ್ ರಾಜಯೋಗ ಧ್ಯಾನ ಕೇಂದ್ರ ಅಂಬಟೆಡ್ಕದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ಆ.17 ರಿಂದ 21ರ ತನಕ ನಡೆಯಲಿರುವುದು.
ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಕರ್ನಾಟಕದಲ್ಲಿ ಪ್ರಥಮ ಪ್ರಯೋಗವಾಗಿ ತೊಟ್ಟಿಲಲ್ಲಿ ಮಲಗಿರುವ ಬಾಲ ಗೋಪಾಲನ (ಶ್ರೀ ಕೃಷ್ಣ)ನನ್ನು ತೂಗುವ ಅವಕಾಶವನ್ನು ಈ ಸಂದರ್ಭದಲ್ಲಿ ಪ್ರತಿಯೊಬ್ಬ ಭಕ್ತರಿಗೂ ಕಲ್ಪಿಸಿ ಕೊಡಲಾಗುವುದು.
ಪ್ರತಿ ದಿನ ಬೆಳಗ್ಗೆ ಗಂಟೆ 8.00 ರಿಂದ ರಾತ್ರಿ ಗಂಟೆ 8.00ರ ವರೆಗೆ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ಮತ್ತು ಧಾರ್ಮಿಕ ಸಭೆಯು ನಡೆಯಲಿರುವುದು.

LEAVE A REPLY

Please enter your comment!
Please enter your name here