ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ಗುಡ್ದಗಾಡು ಓಟ

0

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ಆಯೋಜಿಸಿದ “ಯುವಾಂಕುರ” ರಾಷ್ಟ್ರಾದಾರೆಯೋಳಿಂದು ಅಮೃತ ವರ್ಷದ ಹರ್ಷ ಎಂಬ ಸುಳ್ಯ ಹಾಗೂ ಕಡಬ ತಾಲೂಕು ಮಟ್ಟದ ಅಂತರ್ ಕಾಲೇಜು ವಿವಿಧ ಸ್ಪರ್ಧೆಯು ಆ.13 ರಂದು ನಡೆಯಿತು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನಿವೃತ್ತ ಕಛೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್ ಸ್ಪರ್ಧೆ ಉದ್ಘಾಟಿಸಿದರು.

ವೇದಿಕೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶೋಭಾ ಗಿರಿಧರ್, ಎ ಬಿ ವಿ ಪಿ ವಿಭಾಗ ಸಂಚಲಕ್ ಆಗಿರುವ ಹರ್ಷಿತ್ , ಸುಬ್ರಹ್ಮಣ್ಯ ನಗರ ಕಾರ್ಯದರ್ಶಿ ಸೃಜನ್ ರೈ ಉಪಸ್ಥಿತಿರಿದ್ದರು. ಗುಡ್ಡಗಾಡು ಓಟದ ಬಳಿಕ ಕುಣಿತ ಭಜನೆ, ದೇಶಭಕ್ತಿ ಗೀತೆ, ರಸಪ್ರಶ್ನೆ, ಕಸದಿಂದ ರಸ,ರಂಗೋಲಿ, ನಿಧಿ ಶೋದ ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮದ ಬಳಿಕ ಸಮಾರೋಪ ಭಾಷಣ ಹಾಗೂ ಬಹುಮಾನ ವಿತರಣೆಯನ್ನು ಕೇಶವ ಬಂಗೇರ ಎ ಬಿ ವಿ ಪಿ ಮಂಗಳೂರು ವಿಭಾಗ ಪ್ರಮುಖ್ ನಡೆಸಿಕೊಟ್ಟರು. ಸ್ಪರ್ಧೆಯ ಸಮಗ್ರ ಪ್ರಶಸ್ತಿಯನ್ನು ಕೆ ಎಸ್ ಎಸ್ ಕಾಲೇಜು ಸುಬ್ರಹ್ಮಣ್ಯ ಪಡೆದುಕೊಂಡಿತು.