ಆ.18: ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಆ.18 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವವು ನಡೆಯಲಿರುವುದು.
ಬ್ರಹ್ಮಶ್ರೀ ವೇ. ಕುಂಟಾರು ರವೀಶ ತಂತ್ರಿಯವರ ಮಾರ್ಗದರ್ಶನದಂತೆ ವೈದಿಕ ಕಾರ್ಯಕ್ರಮ ಅರ್ಚಕ ಹರ್ಷಿತ್ ಬನ್ನಿಂತಾಯ ರವರ ನೇತೃತ್ವದಲ್ಲಿ ನಡೆಯಲಿದೆ.
ಬೆಳಗ್ಗೆ ನಿತ್ಯಪೂಜೆಯಾಗಿ ಬಳಿಕ ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆಯಾಗಿ ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ಯಾಗಲಿರುವುದು.
ಬೆಳಗ್ಗೆ ಗಂಟೆ 9.30 ಕ್ಕೆ ಧಾರ್ಮಿಕ ಸಭೆಯು ತೀರ್ಥಕುಮಾರ್ ಕುಂಚಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬಡ್ಡಡ್ಕ ರಾ.ಅ.ಹಿ.ಪ್ರಾ.ಶಾಲೆಯ ಸಂಚಾಲಕ ಎನ್.ಎ.ಜ್ಞಾನೇಶ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಗಂಟೆ 10.00 ರಿಂದ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ವಿಶೇಷವಾಗಿ ಮೊಸರು ಕುಡಿಕೆ- ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಲಿರುವುದು. ಸಂಜೆ ಗಂಟೆ 6.00 ರಿಂದ ಭಜನಾ ಕಾರ್ಯಕ್ರಮ ನಡೆದು ಮಹಾ ಮಂಗಳಾರತಿಯಾಗಿ ಪ್ರಸಾದ ವಿತರಣೆಯಾಗಲಿರುವುದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here