ಪ್ರಜ್ಞಾ ಪಿ .ಎಸ್. ಯವರಿಗೆ ಡಾಕ್ಟರೇಟ್

0

ತಮಿಳುನಾಡಿನ ಪ್ರತಿಷ್ಠಿತ ಭಾರತೀಯಾರ್ ವಿಶ್ವವಿದ್ಯಾನಿಲಯದಲ್ಲಿ ಶ್ರೀಮತಿ ಪ್ರಜ್ಞಾ ಪಿ.ಎಸ್. ರವರು ಬಯೋಟೆಕ್ನಾಲಜಿ ವಿಷಯದಲ್ಲಿ ಆಳ್ವಾಸ್ ಕಾಲೇಜಿನ ಪೋಸ್ಟ್ ಗ್ರಾಜ್ಯುವೇಟ್ ಡಿಪಾರ್ಟ್ಮೆಂಟ್ ಆಫ್ ಬಯೋ ಟೆಕ್ನಾಲಜಿ ಮುಖ್ಯಸ್ಥ ಡಾ. ರಾಮ ಭಟ್ ಪಿ.ಯವರ ಮಾರ್ಗದರ್ಶನದಲ್ಲಿ ಮಂಡಿಸಿದ Phytochemical analysis and pharmacological evaluation of Loeseneriella arnottiana Wight (Maaderi balli) with reference to hyperglycemia ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ.
ಇವರು ಜಾಲ್ಸೂರು ಗ್ರಾಮದ ಕುದ್ಕುಳಿ ಅಜಿತ್ ಕುಮಾರ್ ಕೆ.ಎ ಯವರ ಪತ್ನಿ. ಕಜೆಗದ್ದೆ ಕುದ್ಕುಳಿ ಅಪ್ಪಾಜಿ ಕೆ.ಸಿ. ಮತ್ತು ಶ್ರೀಮತಿ ವಾರಿಜರವರ ಸೊಸೆ ಹಾಗೂ ಪಂಜದ ಸೀತಾರಾಮ ಗೌಡ ಪಳಂಗಾಯ ಮತ್ತು ಚಂದ್ರಾ ಸೀತಾರಾಮರವರ ಪುತ್ರಿ. ಇವರು ಮೂಡಬಿದಿರೆಯ ಆಳ್ವಾಸ್ ಪಿ.ಯು. ಕಾಲೇಜು ಮತ್ತು ಕುಶಾಲನಗರ ವಿವೇಕಾನಂದ ಪಿ.ಯು. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಯಾದಗಿರಿ ಜಿಲ್ಲೆಯ ಕೆಂಬಾವಿ ಹೊಲಿ ಪೈಥ್ ಪಬ್ಲಿಕ್ ಸ್ಕೂಲ್ ನಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.