ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಮತ್ತು ತಂಡದಿಂದ ಧ್ವಜಾರೋಹಣ

0

ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಮುರುಳ್ಯರವರು ತಮ್ಮ ತಂಡದೊಂದಿಗೆ ಆ. 14ರಂದು ಧ್ವಜಾರೋಹಣ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭಾಗೀರಥಿ ಮುರುಳ್ಯ, ಕೆ.ಎಸ್.ಆರ್.ಟಿ.ಸಿ ಟ್ರಾಫಿಕ್ ಕಂಟ್ರೋಲರ್ ಸುಭಾಷ್ ಮುರುಳ್ಯ, ಶಾಂತಿನಗರ ಶಾಲಾ ಗೌರವ ಶಿಕ್ಷಕಿ ಶಾಲಿನಿ, ಕೃಷ್ಣಪ್ಪ ಸತೀಶ್, ಜೀವಿತ್ ಕೊರಗು, ವಿವೇಕ್, ಚಿರಂಜೀವಿ, ಬಾಲ ಗೋಕುಲದ ಮಕ್ಕಳು ಭಾಗವಹಿಸಿದ್ದರು. ಧ್ವಜಾರೋಹಣದ ಬಳಿಕ ಸಿಹಿ ತಿಂಡಿ, ಪಾನಿಯ ವಿತರಣೆ ಮಾಡಲಾಯಿತು.