ಗೂನಡ್ಕ: ಕಾಳಜಿ ಕೇಂದ್ರದಲ್ಲಿರುವ ಕುಟುಂಬಸ್ಥರಿಗೆ ದಾನಿಗಳ ವತಿಯಿಂದ ಊಟದ ವ್ಯವಸ್ಥೆ

0

ಭಾರೀ ಮಳೆಯಿಂದ ಪ್ರವಾಹಕ್ಕೀಡಾಗಿ ಗೂನಡ್ಕದ ಸಜ್ಜನ ಸಭಾಂಗಣದ ಕಾಳಜಿ ಕೇಂದ್ರದಲ್ಲಿ ಆಶ್ರಯವನ್ನು ಪಡೆದಿರುವ ಕುಟುಂಬಸ್ಥರಿಗೆ ಗೂನಡ್ಕದ ಅಲ್–ಅಮೀನ್ ವೆಲ್ಫೇರ್ ಅಸೋಸಿಯೇಶನ್ ಹಾಗೂ ಕುಂಭಕ್ಕೋಡ್ ಬ್ರದರ್ಸ್, ಉದಯ ಸ್ಟೋರ್ ಕಲ್ಲುಗುಂಡಿ ಇವರುಗಳ ವತಿಯಿಂದ ಶನಿವಾರ ರಾತ್ರಿಯ ಊಟದ ವ್ಯವಸ್ಥೆಯನ್ನು ಮಾಡಲಾಯಿತು.

ಈ ವೇಳೆ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆ ಹಾಗೂ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಗೌರವಾಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಪಿ.ಎ.ಅಬ್ದುಲ್ಲ ಕೊಪ್ಪದಕಜೆ, ಅಲ್–ಅಮೀನ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾದ ಜಾಫರ್ ಸಾದಿಕ್ ಕುಂಭಕ್ಕೋಡ್ ಗೂನಡ್ಕ, ಪ್ರಧಾನ ಕಾರ್ಯದರ್ಶಿ ಎ.ಟಿ.ಹಸೈನಾರ್, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಪಿ.ಕೆ.ಅಬೂಸಾಲಿ, ಬದ್ರಿಯಾ ಜುಮಾ ಮಸೀದಿಯ ಉಪಾಧ್ಯಕ್ಷರಾದ ಡಿ.ಆರ್.ಖಾದರ್, ಪ್ರಧಾನ ಕಾರ್ಯದರ್ಶಿ ಉಮ್ಮರ್ ದರ್ಖಾಸ್, ಸಜ್ಜನ ಪ್ರತಿಷ್ಠಾನದ ಕಾರ್ಯದರ್ಶಿ ರಹೀಂ ಬೀಜದಕಟ್ಟೆ, ಕರಾವಳಿ ಎಂಟರ್ ಪ್ರೈಸಸ್ ಮಾಲಕರಾದ ಸಿರಾಜುದ್ದೀನ್ ಮೈಲಿಕಲ್, ಅಲ್–ಅಮೀನ್ ಪದಾಧಿಕಾರಿಗಳಾದ ಜಿ.ಎಂ.ಅಬ್ದುಲ್ಲ, ಡಿ.ಎಂ.ಅಬ್ದುಲ್ಲ,ಟಿ ಬಿ ಅಝೀಝ್ ಮಹಮ್ಮದ್ ಪೆಲ್ತಡ್ಕ ಹಾಗೂ ಪ್ರಮುಖರಾದ ಅಬ್ದುಲ್ ಖಾದರ್ ಕುಂಭಕ್ಕೋಡ್, ಶರೀಫ್ ಕುಂಭಕ್ಕೋಡ್, ಮುನೀರ್ ಪ್ರಗತಿ, ತಾಜುದ್ದೀನ್ ದರ್ಖಾಸ್, ಮುಸ್ತಫಾ ಪಾಂಡಿ, ಸಲೀಂ ಪೆರುಂಗೋಡಿ, ಟಿ.ಬಿ.ಅಬ್ಬಾಸ್, ಹಸೈನಾರ್ ಪೆರುಂಗೋಡಿ ಸೇರಿದಂತೆ ಮತ್ತೀತರರು ಈ ಸಂದರ್ಭ ಉಪಸ್ಥಿತರಿದ್ದರು.
ಚಂದ್ರವಿಲಾಸ್ ಗೂನಡ್ಕ ಕಾಳಜಿ ಕೇಂದ್ರದ ಪರವಾಗಿ ಸರ್ವರನ್ನೂ ಸ್ವಾಗತಿಸಿದರು, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕ ವಂದಿಸಿದರು.